ಸಮಗ್ರ ನ್ಯೂಸ್: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿದ್ದ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರ ಮನೆ ನೆಲಸಮ ಘಟನೆಗೆ ಸಂಬಂಧಿಸಿದಂತೆ ನೆಲಸಮವಾದ ಪ್ರದೇಶಕ್ಕೆ ಶಾಸಕ ಅಶೋಕ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಅವರು ಮನೆ ನೆಲಸಮ ಮಾಡಿರುವುದರ ಹಿಂದೆ ದೇವಸ್ಥಾನದ ಆಡಳಿತ ಮಂಡಳಿ ಇಲ್ಲ, ಯಾರೋ ಭಕ್ತರು
ಮಾಡಿರುವ ಸಾಧ್ಯತೆಯಿದೆ, ಈ ಹಿಂದೆ ನನಗೆ ಹಲವು ಭಕ್ತರು ಮನೆಗಳನ್ನು ತೆರವುಗೊಳಿಸುವಂತೆ ಒತ್ತಡ ಹಾಕಿದ್ದರು.
ಆದರೆ ಮಾತುಕತೆಯ ಮೂಲಕವೇ ಮನೆ ತೆರವುಗೊಳಿಸುವ ಉದ್ದೇಶ ನನ್ನಲ್ಲಿತ್ತು, ಆದರೆ ಭಕ್ತರು ಏಕಾಏಕಿ ಮನೆಯನ್ನು ನೆಲಸಮ ಮಾಡಿದ್ದಾರೆ. ಇನ್ನುಳಿದ ಮನೆಗಳನ್ನೂ ತೆರವುಗೊಳಿಸುವುದಾಗಿ ಭಕ್ತರು ನನಗೆ ಕಾಲ್ ಮಾಡಿ ಹೇಳಿದ್ದಾರೆ, ಅದಕ್ಕೆ ಈಗ ತೆರವು ಮಾಡಬೇಡಿ ಎಂದು ಭಕ್ತರಿಗೆ ತಿಳಿಸಿದ್ದೇನೆ ಎಂದರು.
ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಮನೆ ನೆಲಸಮಾಡಿರುವ ಹಿಂದೆ ನನ್ನದಾಗಲಿ,ದೇವಸ್ಥಾನದ ಆಡಳಿತ ಮಂಡಳಿಯದಾಗಲೀ ಕೈವಾಡವಿಲ್ಲ. ಬಿಜೆಪಿಯವರು ದೇವಸ್ಥಾನದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ, ಇದೇನಾ ಬಿಜೆಪಿಯವರ ಹಿಂದುತ್ವ ಶಾಸಕ ಅಶೋಕ್ ಕುಮಾರ್ ರೈ ಪ್ರಶ್ನಿಸಿದ್ದಾರೆ.