Ad Widget .

ಪುತ್ತೂರು: ಭೀಕರ ರಸ್ತೆ ಅಪಘಾತ| ಖಾಸಗಿ ವಾಹಿನಿಯ ಛಾಯಾಗ್ರಾಹಕ ದುರ್ಮರಣ

ಸಮಗ್ರ ನ್ಯೂಸ್: ಪುತ್ತೂರಿನ ಹೊರವಲಯ ಮುರ ಎಂಬಲ್ಲಿ ನಿನ್ನೆ (ಫೆ 4) ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್‌ ಸವಾರ ಮೃತಪಟ್ಟಿದ್ದಾರೆ. ಚೇತನ್‌ ಕೆಮ್ಮಿಂಜೆ ಮೃತಪಟ್ಟವರು ಎಂದು ವರದಿಯಾಗಿದೆ. ಇವರು ಖಾಸಗಿ ವಾಹಿನಿಯೊಂದರಲ್ಲಿ ಉದ್ಯೋಗಿಯಾಗಿದ್ದರು.

Ad Widget . Ad Widget . Ad Widget .

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರ ಎಂಬಲ್ಲಿ ಬೈಕ್‌ ಹಾಗೂ ಆಟೋ ರಿಕ್ಷಾ ಮಧ್ಯೆ ಈ ಅಪಘಾತ ಸಂಭವಿಸಿದೆ. ಬೈಕ್‌ ನಲ್ಲಿ ಚೇತನ್‌ ಜತೆಗೆ ಇನ್ನೋರ್ವ ಬಾಲಕ ಕೂಡ ಇದ್ದ ಎಂದು ತಿಳಿದು ಬಂದಿದೆ. ಚೇತನ್‌ ಅವರು ನೆಹರೂ ನಗರದ ಮತಾವುನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದು, ಅಲ್ಲಿಂದ ಬಾಲಕನನ್ನು ಚುರುಮುರಿ ತಿನ್ನಿಸಲು ಕರೆದುಕೊಂಡು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

Ad Widget . Ad Widget .

ಅಪಘಾತದ ತೀವ್ರತೆಗೆ ಸವಾರ ಹಾಗೂ ಬಾಲಕ ಇಬ್ಬರು ಡಾಮಾರು ರಸ್ತೆಗೆ ಎಸೆಯಲ್ಪಟ್ಟಿದ್ದು, ಬಾಲಕ ಅಪಾಯದಿಂದ ಪಾರಾಗಿದ್ದಾರೆ. ಆದರೇ ಗಂಭೀರವಾಗಿ ಗಾಯಗೊಂಡ ಚೇತನ್‌ ಅವರನ್ನು ಪುತ್ತೂರು ಆಸ್ಫತ್ರೆಗೆ ಸಾಗಿಸಲಾಯಿತಾದರೂ ಬದುಕಿ ಉಳಿಯಲಿಲ್ಲ. ಬಾಲಕ ಪುತ್ತೂರಿನ ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಹಲವು ಸಮಯದಿಂದ ಮುರ ಅಪಘಾತ ವಲಯವಾಗಿ ಪರಿವರ್ತಿತಗೊಂಡಿದ್ದು , ಹಂಪ್ಸ್‌ ಅಳವಡಿಸಿದ ಸ್ಥಳದಲ್ಲೇ ಅಪಘಾತ ನಡೆದಿದೆ.

Leave a Comment

Your email address will not be published. Required fields are marked *