ಬೆಂಗಳೂರು: ಸ್ವಾತಂತ್ರ್ಯದ ಮಹತ್ವದ ಬಗ್ಗೆ ಹೇಳಲು ಹೋಗಿ ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಎಡವಟ್ಟು ಮಾಡಿಕೊಂಡಿದ್ದಾರೆ. ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಹಾಕುವಾಗ ಎಡವಟ್ಟು ಮಾಡಿಕೊಂಡಿದ್ದಾರೆ.
1866 ರಲ್ಲಿ ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ರು ಎಂದು ಬರೆದುಕೊಂಡಿದ್ದಾರೆ. 1915, 1920, 1927, 1934, 1936 ರಲ್ಲಿ ಗಾಂಧೀಜಿ ಬೆಂಗಳೂರಿಗೆ ಭೇಟಿ ನೀಡಿದ್ದರು ಎಂದು ತಪ್ಪು ಮಾಹಿತಿ ಕೊಡಲಾಗಿದೆ.
ಗಾಂಧೀಜಿಯವರು ಹುಟ್ಟಿದ್ದೇ 1869ರ ಅಕ್ಟೋಬರ್ 2ರಂದು. ಹೀಗಿರುವಾಗ, 1866 ರ ಹೋರಾಟದಲ್ಲಿ ಗಾಂಧಿ ಪಾಲ್ಗೊಳ್ಳಲು ಹೇಗೆ ಸಾಧ್ಯ? ಎಲ್ಲಿಯ 1866? ಎಲ್ಲಿಯ 1936 ಎನ್ನುವ ಪ್ರಶ್ನೆ ಉದ್ಭವ ಆಗಿದೆ. ಹುಟ್ಟುವ ಮೊದಲೇ ಹೋರಾಟದಲ್ಲಿ ಭಾಗಿ ಎನ್ನುವ ಮಾಹಿತಿ ನೀಡಿದಂತಾಗಿದೆ. ಫೇಸ್ಬುಕ್ ಪೋಸ್ಟ್ನಲ್ಲಿ ಡಿಕೆಶಿ ಎಡವಟ್ಟು ಮಾಡಿಕೊಂಡಿದ್ದಾರೆ.