ಸಮಗ್ರ ನ್ಯೂಸ್: ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿ ಕೊಟ್ಟಿಗೆಯಲ್ಲಿದ್ದಂತಹ 7 ಹೋರಿಗಳು ಸಜೀವವಾಗಿ ದಹನ ಗೊಂಡಿರುವ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೇಮಗಾರದಲ್ಲಿ ನಡೆದಿದೆ.
ಮನೆಯಲ್ಲಿದ್ದ ವೈರ್‌ಗೆ ಶಾರ್ಟ್ ಸರ್ಕ್ಯೂರ್ಟ್‌ನಿಂದಾಗಿ ಕಿಡಿ ಹೊತ್ತಿದ್ದು, ಕೊಟ್ಟಿಗೆಯ ಅಟ್ಟದ ಮೇಲಿರುವ ಹುಲ್ಲಿಗೆ ಈ ಕಿಡಿ ತಾಗಿ ಬೆಂಕಿ ಹತ್ತಿದೆ. ಹುಲ್ಲಿಗೆ ಬಿದ್ದ ಬೆಂಕಿ ಆವರಿಸಿ ಕೊಟ್ಟಿಗೆಯಲ್ಲಿದ್ದ 7 ಹೋರಿಗಳು ಸಜೀವ ದಹನವಾಗಿದೆ.
ಹೇಮಗಾರದ ಮಹೇಶ್ ಹೆಗಡೆ ಎಂಬವರ ಮನೆಯಲ್ಲಿ ಬಾನುವಾರ ತಡರಾತ್ರಿ ಘಟನೆ ನಡೆದಿದ್ದು, ಸೋಮವಾರ ಸಂಜೆ ವೇಳೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.