ಸಮಗ್ರ ನ್ಯೂಸ್: ಬಿಗ್ ಬಾಸ್ ಸೀಸನ್ 11 ರ ಗ್ರ್ಯಾಂಡ್ ಫಿನಾಲೆ ದಿನಾಂಕ ಈಗಾಗಲೇ ನಿಗದಿಯಾಗಿದ್ದು ಜನವರಿ 26 ಭಾನುವಾರದಂದು ನಡೆಯಲಿದೆ.
ಬಿಗ್ ಬಾಸ್ ಮನೆಯೊಳಗೆ ಈ ಸೀಜನ್‌ನಲ್ಲಿ ಕಾಲಿಟ್ಟ 20 ಜನರ ಪೈಕಿ ಇದೀಗ ಕೇವಲ ಎಂಟು ಜನ ಉಳಿದುಕೊಂಡಿದ್ದಾರೆ. ವಾರದ ಮಧ್ಯದ ಎಲಿಮಿನೇಷನ್ ರದ್ದು ಮಾಡಿದ ಬಿಗ್ ಬಾಸ್ ವಾರಾಂತ್ಯಕ್ಕೆ ಡಬ್ಬಲ್ ಎಲಿಮಿನೇಷನ್ ಇದೆ ಎಂದಿದ್ದಾರೆ.
ಈಗಾಗಲೇ ಮೂರು ಜನ ಗ್ರ್ಯಾಂಡ್ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಟಿಕೆಟ್ ಟು ಫಿನಾಲೆ ಪಡೆದ ಹನುಮಂತ ಹಾಗೂ ಬಿಗ್ ಬಾಸ್ ಮನೆಯ ಮಾಸ್ಟರ್ ಎನಿಸಿಕೊಂಡಿದ್ದ ತ್ರಿವಿಕ್ರಮ್ ಹಾಗೂ ತಮ್ಮ ವ್ಯಕ್ತಿತ್ವದಿಂದಲೇ ಪ್ರೇಕ್ಷಕರ ಮನಸ್ಸು ಗೆದ್ದ ಪಾರು ಖ್ಯಾತಿಯ ನಟಿ ಮೋಕ್ಷಿತಾ ಪೈ ಫಿನಾಲೆ ವಾರಕ್ಕೆ ಆಯ್ಕೆ ಆಗಿದ್ದಾರೆ.
ಮೋಕ್ಷಿತಾ ಪೈ, ಧನರಾಜ್ ಆಚಾರ್, ಗೌತಮಿ ಜಾದವ್, ಉಗ್ರಂ ಮಂಜು, ಭವ್ಯಾ ಗೌಡ ಹಾಗೂ ರಜತ್ ಈ ವಾರ ನಾಮಿನೇಟ್ ಆಗಿದ್ದರು. ಈ ವೇಳೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಕೊನೆಯ ಕ್ಯಾಪ್ಟನ್ ಹನುಮಂತ ಅವರಿಗೆ ಬಿಗ್ ಬಾಸ್ ವಿಶೇಷ ಅಧಿಕಾರವೊಂದನ್ನು ನೀಡಿ ಉತ್ತಮ ಸ್ಪರ್ಧಿಯನ್ನು ನೀವು ನಾಮಿನೇಷನ್‌ನಿಂದ ಪಾರು ಮಾಡಬೇಕು ನಿಮ್ಮ ಆಯ್ಕೆಯನ್ನು ಯೋಚಿಸಿ ಘೋಷಿಸಿ ಎಂದು ಬಿಗ್ ಬಾಸ್ ತಿಳಿಸಿದ್ದರು. ಈ ವೇಳೆ ಅವರು ಮೋಕ್ಷಿತಾ ಪೈ ಅವರ ಹೆಸರನ್ನು ತೆಗೆದುಕೊಂಡು ಫಿನಾಲೆ ವಾರಕ್ಕೆ ಹೋಗಲು ಅವಕಾಶ ಮಾಡಿಕೊಡುತ್ತಾರೆ.