Ad Widget .

ಕಡಬ: ಅಪಘಾತದಲ್ಲಿ ಅಪ್ರಾಪ್ತ ಬಾಲಕ ಸಾವನ್ನಪ್ಪಿದ ಹಿನ್ನೆಲೆ| ಪರವಾನಗಿ ಇಲ್ಲದೇ ಮಕ್ಕಳು ವಾಹನ ಚಲಾಯಿಸಿದರೆ ಕಠಿಣ ಕ್ರಮಕ್ಕೆ ತಹಶಿಲ್ದಾರ್ ಆದೇಶ

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕನೋರ್ವ ಬೈಕ್ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ಮೋರಿಗೆ ಗುದ್ದಿ ಮೃತಪಟ್ಟ ಘಟನೆ ಜ.17 ರ ಮುಂಜಾನೆ ಕಡಬ ಬಳಿ ನಡೆದಿತ್ತು. ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್ ಎಂಬವರ ಪುತ್ರ, ಪೇರಡ್ಕದ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ಬಾಲಕ ಆಶಿಶ್(16) ಮೃತ ಪಟ್ಟಿದ್ದ. ಈ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿತ್ತು.

Ad Widget . Ad Widget .

ಇದರ ಬೆನ್ನಲ್ಲೇ ಕಡಬ ತಾಲೂಕು ದಂಡಾಧಿಕಾರಿ ಪ್ರಭಾಕರ ಖಜೂರೆ ಅವರು ತನ್ನ ಅಧಿಕಾರ ಚಲಾಯಿಸಿ ಅವಘಡಗಳು ಸಂಭವಿಸದಂತೆ ತಡೆಯಲು ಮುಂಜಾಗ್ರತಾ ಕ್ರಮವಹಿಸುವುದು ತಾಲೂಕು ಆಡಳಿತದ ಕರ್ತವ್ಯವಾಗಿರುತ್ತದೆ ಎಂಬ ಜವಾಬ್ದಾರಿಯನ್ನು ಉಲ್ಲೇಖಿಸಿ ಕ್ರಮ ಕೈಳ್ಳುವಂತೆ ಪೊಲೀಸ್ ಠಾಣೆಗಳಿಗೆ ಮತ್ತು ಶಾಲಾ ಕಾಲೇಜು ಮುಖ್ಯಸ್ಥರಿಗೆ ಆದೇಶಿಸಿದ್ದಾರೆ.

Ad Widget . Ad Widget .

ಈ ಕುರಿತಂತೆ ಆದೇಶಿಸಿರುವ ತಹಶೀಲ್ದಾರ್, ಭಾರತೀಯ ಮೋಟಾರು ವಾಹನ ಕಾಯಿದೆ 1988 ರ ಕಲಂ, 4 ರ ಜೊತೆ 181 IMV ರ ಪ್ರಕಾರ ಅಪ್ರಾಪ್ತ ವಯಸ್ಸಿನ ಮಕ್ಕಳು, ಕಲಂ, 3(1) ರ ಜೊತೆ 181 IMV ರ ಪ್ರಕಾರ ಪರವಾನಗಿ ರಹಿತ ವಾಹನ ಚಾಲನೆ ಮತ್ತು, ಕಲಂ, 5(1) ರ ಜೊತೆ 181 IMV ರ ಪ್ರಕಾರ ವಾಹನವನ್ನು ಚಾಲನೆಗೆ ಕೊಡುವುದು ಕಾಯ್ದೆಯ ಉಲ್ಲಂಘನೆಯಾಗಿರುತ್ತದೆ. ಆದರೆ ಕಡಬ ತಾಲೂಕಿನ ಹಲವೆಡೆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪರವಾನಿಗೆ ರಹಿತ ವ್ಯಕ್ತಿಗಳು ವಾಹನೆ ಚಾಲನೆ ಮಾಡುತ್ತಿರುವುದು ಹಾಗೂ ಅದರಿಂದಾಗಿ ಅವಘಡಗಳು ಸಂಭವಿಸುತ್ತಿರುವುದು ಕಂಡುಬರುತ್ತಿದೆ

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ವಿದ್ಯಾರ್ಥಿನಿಯರ ವಾಹನ ಚಾಲನೆ, ಪರವಾನಿಗೆ ರಹಿತ ವ್ಯಕ್ತಿಗಳ ವಾಹನ ಚಾಲನೆಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ವಾಹನ ನೀಡುವ ಪೋಷಕರ ಮೇಲೆ ದಂಡ ವಿಧಿಸುವಂತೆ ಮತ್ತು ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕಾನೂನು ಕ್ರಮವಹಿಸಲು ಕಡಬ, ಉಪ್ಪಿನಂಗಡಿ, ಬೆಳ್ಳಾರೆ, ಸುಬ್ರಹ್ಮಣ್ಯ ಠಾಣಾಧಿಕಾರಿಗಳಿಗೆ ಆದೇಶಿಸಿದ್ದಾರೆ.

ಕಡಬ ತಾಲೂಕು ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಲಾ-ಕಾಲೇಜಿಗೆ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನವನ್ನು ತರದಂತೆ ಸೂಚಿಸಿ, ಶಾಲಾ ಕಾಲೇಜು ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರು ತಮ್ಮ ಶಾಲಾ ಹಂತದಲ್ಲಿ ಪೋಷಕರ ಸಭೆಯನ್ನು ನಡೆಸಿ ಸಭೆಯ ಛಾಯಾಚಿತ್ರ ಹಾಗೂ ನಡವಳಿಯನ್ನು ಈ ಕಛೇರಿಗೆ ಸಲ್ಲಿಸಲು ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಾಲೂಕಿನ ಎಲ್ಲಾ ಸರಕಾರಿ, ಖಾಸಗಿ, ಅನುದಾನಿತ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ಆದೇಶಿಸಿದ್ದಾರೆ. ಅದಲ್ಲದೆ ಮುಂದೆ ಇಂತಹ ಅವಘಡಗಳು ಸಂಭವಿಸಿದಲ್ಲಿ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಾಲಾ ಕಾಲೇಜು ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *