ಸಮಗ್ರ ನ್ಯೂಸ್ : ಪತಿಗೆ ತನ್ನ ಪತ್ನಿಯ ಅನೈತಿಕ ಸಂಬಂಧದ ವಿಷಯ ತಿಳಿದು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿ ನಡೆದಿದೆ.
ಏಳು ವರ್ಷಗಳ ಹಿಂದೆ ದೇವರಾಜ್ ತನ್ನ ಸಂಬಂಧಿಯಾಗಿದ್ದ ತೇಜು ಎನ್ನುವವಳನ್ನು ಮದುವೆಯಾಗಿದ್ದ. ಇವರಿಗೆ ಎರಡು ಮಕ್ಕಳು ಇದ್ದಾರೆ. ಹಾಗಿದ್ದರೂ ಸಹ ತೇಜ ಪರ ಪುರುಷನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು.
ಈ ಹಿಂದೆ ಗಂಡ ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಮನೆ ಬಿಟ್ಟು ಓಡಿಹೋಗಿದ್ದಳು. ನಂತರ ರಾಜೀ ಸಂದಾನ ಮಾಡಿ ವಾರದ ಹಿಂದೆ ಅಷ್ಟೇ ಪತಿ ದೇವರಾಜ್ ಪತ್ನಿಯನ್ನು ಮನೆ ಸೇರಿಸಿಕೊಂಡಿದ್ದ.
ಪತ್ನಿಯ ಕಾರಣದಿಂದ ಪತಿ ದೇವರಾಜ್ ಗೆ ಊರಿನಲ್ಲಿ ತಲೆ ಎತ್ತಿ ಓಡಾಡಲು ಆಗದೆ ಕೋಪದಲ್ಲಿ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.