Ad Widget .

ರಾಜ್ಯದ ಈ ಪ್ರಮುಖ ದೇವಾಲಯದಲ್ಲಿ ಬಾಳೆಹಣ್ಣು ಬಳಕೆ‌ ನಿಷೇಧಿಸಿ ಆದೇಶ| ಕಾರಣ ಕೇಳಿದ್ರೆ ನೀವೂ ಸರಿ ಎನ್ನುವಿರಿ…

ಸಮಗ್ರ ನ್ಯೂಸ್: ಎಲ್ಲಾ ಶುಭ ಕಾರ್ಯದಲ್ಲಿ ಬಾಳೆಹಣ್ಣು ಇದ್ದೇ ಇರುತ್ತೆ. ಅದರಲ್ಲೂ ದೇವಾಲಯಕ್ಕೆ ನಾವು ಹೋಗುವಾಗ ಹಣ್ಣು ಕಾಯಿಯ ಜೊತೆಗೆ ಬಾಳೆಹಣ್ಣು ತೆಗೆದುಕೊಂಡು ಹೋಗುವುದು ಸಾಮಾನ್ಯ. ಹಾಗೆ ಪೂಜೆ ಸಮಯದಲ್ಲಿ ಬಾಳೆಹಣ್ಣು ಇಟ್ಟು ಪೂಜೆ ಸಲ್ಲಿಸಿ ಬಳಿಕ ಅದನ್ನು ಪ್ರಸಾದವಾಗಿ ನೀಡುವುದು ಕೂಡ ನೋಡಬಹುದು.

Ad Widget . Ad Widget .

ಆದರೆ ಈಗ ರಾಜ್ಯದ ಒಂದು ದೇವಾಲಯ ಈ ಬಾಳೆಹಣ್ಣನ್ನೇ ನಿಷೇಧ ಮಾಡಿಬಿಟ್ಟಿದೆ. ನಿಮಗಿದು ಅಚ್ಚರಿ ತರಿಸಬಹುದು. ದೇವಾಲಯವೇ ಬಾಳೆಹಣ್ಣನ್ನು ನಿಷೇಧಿಸಲು ಕಾರಣವೇನು? ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಬಹುದು. ಅಚ್ಚರಿ ಎನಿಸಿದರು ಇದು ಸತ್ಯ, ಹಾಗೆ ಅದರ ಕಾರಣ ಕೇಳಿದರೆ ನಿಮಗೂ ಸರಿ ಎನಿಸಬಹುದು.

Ad Widget . Ad Widget .

ದೇವಾಲಯಗಳಿಗೆ ಬಾಳೆಹಣ್ಣು ತವರು ಭಕ್ತರು ಪೂಜೆಯ ಬಳಿಕ ಅದನ್ನು ದೇವಾಲಯದಲ್ಲಿ ತಿನ್ನುತ್ತಾರೆ. ಇಲ್ಲವೆ ಅಲ್ಲಿರುವ ಕೋತಿಗಳಿಗೆ, ಹಸುಗಳಿಗೆ, ಆನೆಗೆ ನೀಡುವ ಕಾರ್ಯ ಮಾಡುತ್ತಾರೆ. ಇದು ಒಳ್ಳೆಯದು ಎಂದು ಕೆಲವರು ಹೇಳಬಹುದು, ಆದರೆ ಇದರಿಂದ ಸಮಸ್ಯೆಗಳಿವೆ ಎಂಬುದು ನಿಮಗೆ ಗೊತ್ತಾ? ಇದೇ ಕಾರಣಕ್ಕೆ ಈ ದೇವಾಲಯ ಈಗ ಬಾಳೆಹಣ್ಣು ತರಬಾರದು ಎಂದು ಆದೇಶ ಹೊರಡಿಸಿದೆ.

ಹಂಪಿಯ ಶಿವನ ದೇವಾಲಯ ಆಡಳಿತ ಮಂಡಳಿ ಈ ರೀತಿಯ ಆದೇಶ ಹೊರಡಿಸಿದೆ. ಇದಕ್ಕೆ ಕಾರಣವೂ ಇದೆ. 7ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ವಿರೂಪಾಕ್ಷ ದೇವಾಲಯಕ್ಕೆ ನಿತ್ಯ ಸಾವಿರಾರು ಮಂದಿ ಆಗಮಿಸುತ್ತಾರೆ. ಈ ದೇವಾಲಯದ ಪ್ರಮುಖ ಆಕರ್ಷಣೆ ಅಂದರೆ ಅಲ್ಲಿರುವ ಆನೆ.

ಈ ಆನೆ ನೋಡಲು ಬರುವವರು ಆನೆಗೆ ಬಾಳೆಹಣ್ಣು ತಿನ್ನಿಸಲು ಮುಂದೆ ಬೀಳುತ್ತಾರೆ, ಹಾಗೆ ಆನೆಗೆಂದು ತರವು ಬಾಳೆಹಣ್ಣಿನಲ್ಲಿ ಕೆಲವನ್ನು ಅವರೇ ತಿಂದು ಎಲ್ಲೆಂದರಲ್ಲಿ ಸಿಪ್ಪೆಯನ್ನು ಎಸೆಯುತ್ತಾರೆ ಎಂಬುದು ದೇವಾಲಯ ಆಡಳಿತ ಮಂಡಳಿತ ತಲೆನೋವಾಗಿತ್ತು. ಅಲ್ಲದೆ ಆನೆಗೆ ಬಾಳೆಹಣ್ಣು ನೀಡುವ ಭರದಲ್ಲಿ ಅಪಾಯಗಳ ತಂದುಕೊಳ್ಳುವುದು ಕೂಡ ನಡೆಯುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ಬಾಳೆಹಣ್ಣು ತರದಂತೆ ಸೂಚಿಸಲಾಗಿದೆ.

ಆನೆ ಹಾಗೂ ಭಕ್ತರ ಹಿತದೃಷ್ಟಿಯಿಂದ ಬಾಳೆಹಣ್ಣಿಗೆ ನಿಷೇಧ ಹೇರಲು ನಿರ್ಧರಿಸಲಾಗಿದೆ ಎಂದು ವಿರೂಪಾಕ್ಷ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ‘ಭಕ್ತರು ಉತ್ಸಾಹದಿಂದ ಆನೆಗೆ ಅತಿಯಾಗಿ ಬಾಳೆಹಣ್ಣು ನೀಡುತ್ತಾರೆ. ಇದು ಅಲ್ಲಿನ ಸ್ಥಳವನ್ನು ಕೊಳಕು ಮಾಡುವ ಜೊತೆಗೆ ಆನೆಯ ಆರೋಗ್ಯಕ್ಕೂ ಹಾನಿಕಾರಕ. ಹಾಗೆ ಬಾಳೆಹಣ್ಣುಗಳ ತಂದಿರುವ ಪ್ಲಾಸ್ಟಿಕ್ ಚೀಲಗಳನ್ನು ಇಲ್ಲಿ ಬಿಟ್ಟು ತೆರಳುತ್ತಿದ್ದು ಅದನ್ನು ವಿಲೇವಾರಿ ಮಾಡುವುದು ದೊಡ್ಡ ಕೆಲಸ ಎಂದು ದತ್ತಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇವಸ್ಥಾನದ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ಕೇಳಿಬಂದರೂ. ಇದೊಂದು ಮಾದರಿ ನಡೆಯಾಗಿದೆ ಎಂದು ಹಲವರು ಸ್ವಾಗತಿಸಿದ್ದಾರೆ. ದೇವಾಲಯದ ಪರಿಸರ, ಆನೆಯ ಆರೋಗ್ಯ ಹಾಗು ಭಕ್ತರ ಹಿತದೃಷ್ಟಿಯಿಂದ ಈ ನಿರ್ಧಾರ ಪ್ರಕಟಿಸಿರುವುದು ಉತ್ತಮ ನಡೆ ಎಂಬ ಪ್ರಶಂಸೆ ಕೂಡ ಕೇಳಿಬಂದಿದೆ.

Leave a Comment

Your email address will not be published. Required fields are marked *