ಸಮಗ್ರ ನ್ಯೂಸ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವಾಚ್ಯ ಪದಗಳಿಂದ ನಿಂದಿಸಿರುವುದು ದೃಢಪಟ್ಟಿದೆ. ಸರ್ಕಾರದ ಟಿವಿಯಲ್ಲಿಯೇ ಇದು ದಾಖಲಾಗಿದ್ದು, ಡಿಐಪಿಆರ್ ನಿಂದ ಸಿಐಡಿಗೆ ಅಸಲಿ ವಿಡಿಯೋ ನೀಡಲಾಗಿದೆ. 7 ಬಾರಿ ಸಿಟಿ ರವಿ ನಿಂದಿಸಿರುವುದು ದಾಖಲಾಗಿದೆ ಎಂದು ಹೇಳಲಾಗಿದೆ.
ಸಿ.ಟಿ. ರವಿ ಅವಾಚ್ಯ ಪದಗಳಿಂದ ನಿಂದಿಸಿರುವುದು ಖಾಸಗಿ ವಾಹಿನಿ ವಿಡಿಯೋದಲ್ಲಿ ದಾಖಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರಾದರೂ ಅದನ್ನು ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸಭಾಪತಿ ತಿಳಿಸಿದ್ದರು. ಈ ಕುರಿತಾದ ಆಡಿಯೋ, ವಿಡಿಯೋ ಇಲ್ಲವೆಂದು ಹೇಳಿದ್ದು, ಇದೀಗ ಅಸಲಿ ವಿಡಿಯೋ ಸಿಐಡಿಗೆ ಸಿಕ್ಕಿದೆ. ಸದನದಲ್ಲಿನ ಸರ್ಕಾರಿ ಟಿವಿಯಲ್ಲಿನ ವಿಡಿಯೋ ದೊರೆತಿದ್ದು, ಈ ವಿಡಿಯೋ ಸಿ.ಟಿ. ರವಿಗೆ ಸಂಕಷ್ಟ ತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದೇ ಕಾರಣಕ್ಕೆ ಧ್ವನಿ ಪರೀಕ್ಷೆಗೆ ಒಳಪಡಲು ಸಿ.ಟಿ. ರವಿ ಹಿಂದೇಟು ಹಾಕುತ್ತಿದ್ದಾರೆ. ನಾನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನಿಂದಿಸಿಲ್ಲ ಎಂದು ವಾದಿಸಿದ್ದಾರೆ.
ಸಿ.ಟಿ. ರವಿ ಅವಾಚ್ಯ ಶಬ್ದ ಬಳಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಸಿಐಡಿ ಪೋಲೀಸರ ಪ್ರಾಥಮಿಕ ತನಿಖೆಯಲ್ಲಿ ಧ್ವನಿ ರಹಸ್ಯ ಗೊತ್ತಾಗಿದೆ. ಸದನದ ವಿಡಿಯೋ ರೆಕಾರ್ಡ್ಸ್ ನಲ್ಲಿ ಅವಾಚ್ಯ ಪದ ಬಳಕೆ ಮಾಡಿರುವುದು ಪತ್ತೆಯಾಗಿದೆ.