ಸಮಗ್ರ ನ್ಯೂಸ್: ಪ್ರತಿಯೊಬ್ಬರ ಜೀವನದಲ್ಲಿ ರಾಶಿಗಳು ಪ್ರಭಾವ ಬೀರುತ್ತವೆ. ದಿನನಿತ್ಯದ ಆಗುಹೋಗುಗಳಲ್ಲಿ ರಾಶಿಗಳ ಪ್ರಭಾವ ಇದೆ ಎಂಬುದು ಶಾಸ್ತ್ರ ನಂಬಿಕೆ. ಈ ವಾರ ರಾಶಿಗಳ ಫಲಾಫಲಗಳೇನು? ಯಾರಿಗೆ ಲಾಭ? ಯಾವ ರಾಶಿಗೆ ಶುಭ? ನೋಡೋಣ…
ಮೇಷರಾಶಿ:
ಪುಷ್ಯ ಮಾಸದ ಬಹುಳ ಪಾಡ್ಯದಂದು ಮಧ್ಯಾಹ್ನ ಮಕರ ರಾಶಿಗೆ ಸಂಕ್ರಮಣದಂದು ಸೂರ್ಯನು ಉತ್ತರ ದಿಕ್ಕಿಗೆ ಚಲಿಸುತ್ತಾನೆ. ಸಮಸ್ತ ಮನುಕುಲ ಉದ್ಧಾರಕ್ಕೆ ಪಿತೃಗಳಿಗೆ ತಿಲತರ್ಪಣ ನೀಡಿ ತೃಪ್ತಿಪಡಿಸಿ. ಎಳ್ಳು ಬೆಲ್ಲವನ್ನು ಕೊಟ್ಟು ಒಳ್ಳೆಯ ಮಾತನಾಡಿ, ಪುಣ್ಯವನ್ನು ಕಾಪಾಡಿಕೊಳ್ಳಿ. ದಶಮದಲ್ಲಿ ಬುಧನೊಂದಿಗೆ ಸಂಕ್ರಮಣದಿಂದ ವಿಶೇಷ ಫಲ, ಉತ್ತರೋತ್ತರ ಅಭಿವೃದ್ಧಿ ನೀಡುತ್ತಾನೆ. ಸೂರ್ಯನಿಗೆ ಆದಿತ್ಯ ಹೃದಯ ಪಾರಾಯಣ ಮಾಡಿ, ಭಾನುವಾರ ಸೂರ್ಯನಾರಾಯಣನಿಗೆ ಕೆಂಪು ಪುಷ್ಪದಿಂದ ಅರ್ಚನೆ ಮಾಡಿ.
ವೃಷಭ ರಾಶಿ:
ಈ ರಾಶಿಯವರಿಗೆ ಸೂರ್ಯನು ಅಷ್ಟಮದಿಂದ ನವಮಕ್ಕೆ ಬಂದು 14ನೇ ತಾರೀಖಿನ ನಂತರ ವಿಶೇಷವಾದ ಪ್ರಗತಿಯನ್ನು, ಲಾಭವನ್ನು ಕೊಟ್ಟೆ ಕೊಡುತ್ತಾನೆ. ಬೆಳಕಿನಲ್ಲಿ ನಡೆಯಬಹುದು. ಕತ್ತಲಿನಲ್ಲಿ ನಡೆಯುವುದು ಅಸಾಧ್ಯ. ನೀಲಾದೇವಿಯನ್ನು ಪೂಜಿಸಿ, ವಕ್ರತ್ವದಲ್ಲಿ ಗುರುವಿರುವುದರಿಂದ ಬೃಹಸ್ಪತಿ ಅಷ್ಟೋತ್ತರ ಪಾರಾಯಣ ಮಾಡಿ.
ಮಿಥುನ ರಾಶಿ:
ಈ ರಾಶಿಯವರಿಗೆ ಸಪ್ತಮದಲ್ಲಿ ಸೂರ್ಯನು ಅಷ್ಟಮಕ್ಕೆ ಸಾಗಿ ಅಲ್ಪ ಸ್ವಲ್ಪ ಉಷ್ಣಾಂಶದ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹೆದರುವ ಅಗತ್ಯವಿಲ್ಲ. ನಿತ್ಯವೂ ಕೆಂಪು ಹೂವಿನಿಂದ ಸೂರ್ಯ ನಾರಾಯಣ ಅಷ್ಟೋತ್ತರ ಪಠಿಸಿ. ಉದಯ ಸೂರ್ಯನನ್ನು ದರ್ಶಿಸಿ ಪೂಜಿಸಿ.
ಕಟಕ ರಾಶಿ:
ಏಳನೇ ಮನೆಯ ಸೂರ್ಯ, 11ನೇ ಮನೆಯ ಗುರು ಎರಡೂ ಗ್ರಹಗಳು ಶುಭವೇ. ಯಾರೇ ಜೀವನದಲ್ಲಿ ಬೆಳಕು, ವೃದ್ಧಿಯನ್ನು ಕಾಣಬೇಕಾದರೆ ಸೂರ್ಯನ ಪ್ರಾರ್ಥನೆ ಮಾಡಿ. ಗಣಪತಿ ಯನ್ನು ಎಕ್ಕದ ಹೂವಿನಿಂದ ಪೂಜಿಸಿ, ಬೆಲ್ಲ ನೈವೇದ್ಯ ಮಾಡಿದರೆ ವಿಶೇಷ ಫಲ ನೀಡುತ್ತಾನೆ.
ಸಿಂಹ ರಾಶಿ:
ರಾಶ್ಯಾಧಿಪತಿಯು ಷಷ್ಠಕ್ಕೆ ಸಾಗಿ, 14.1. 25ರಿಂದ ಶನಿ ಮನೆಗೆ ಬಂದರೂ, ನಿಮ್ಮ ಕೀರ್ತಿಗೆ ಏನೂ ಅಡ್ಡ ಬರುವುದಿಲ್ಲ. ಸಿಂಹ ರಾಶಿಯಲ್ಲಿ ಜನಿಸಿದವರು ಪಿತೃಋಣ, ದೈವ ಋಣ, ಗುರುಋಣ ತೀರಿಸಿದರೆ ಅವರನ್ನು ಯಾರ ಕೈಯಲ್ಲೂ ಕಟ್ಟಿಹಾಕಲಾಗದು. ಜ.14ನೇ ತಾರೀಖಿನಂದು ಶ್ರದ್ಧಾ-ಭಕ್ತಿಯಿಂದ ತಿಲತರ್ಪಣಕೊಟ್ಟು ಪಿತೃಗಳ ಅನುಗ್ರಹ ಪಡೆಯಿರಿ.
ಕನ್ಯಾ ರಾಶಿ:
ಈ ರಾಶಿಗೆ ಸೂರ್ಯನು 14.1.25ರಿಂದ ಬರುವುದರಿಂದ ವ್ಯವಹಾರದಲ್ಲಿ ಯಶಸ್ಸನ್ನು ಕಾಣುವಿರಿ. ಶನಿ ಮತ್ತು ಗುರು ಗ್ರಹಗಳು ಚೆನ್ನಾಗಿದ್ದು, ಹೆಚ್ಚಿನ ಅಭ್ಯುದಯ ಕಂಡುಕೊಳ್ಳಬಹುದು. ಗುರು ವಕ್ರನಾಗಿರುವುದರಿಂದ ಗುರು ನಿಂದನೆ ಮಾಡದಿರಿ. ಗುರುವಿನ ಅನುಗ್ರಹ ಪಡೆದು ಮುಂದೆ ಸಾಗಿದರೆ ಕಾಲವು ಉತ್ತಮವಾಗಿರುತ್ತದೆ.
ತುಲಾ ರಾಶಿ:
ಈ ರಾಶಿಗೆ ಸೂರ್ಯನು ಚತುರ್ಥಕ್ಕೆ 14.1.25ರಿಂದ ಶನಿಯ ಮನೆಗೆ ಬಂದಿರುವುದರಿಂದ, ಶನಿಯು ಪಂಚಮ ಸ್ಥಾನದಿಂದ ಜರುಗುವ ಕಾಲ ಹತ್ತಿರದಲ್ಲಿದೆ. ಆದರೂ ಶನಿ ಗ್ರಹವನ್ನು ಪೂಜಿಸಲೇಬೇಕು. ಶನಿವಾರ ಎಳ್ಳುಉಂಡೆ ನೈವೇದ್ಯ ಮಾಡಿ. ಕಾಕರಾಜನಿಗೆ ಊಟಕ್ಕೆ ಮುಂಚೆ ಅನ್ನವನ್ನು ಇಟ್ಟು ಬನ್ನಿ. ನಿಮ್ಮ ಪಿತೃಗಳೇ ನಿಮ್ಮನ್ನು ಹರಸುತ್ತಾರೆ. ನಿಮಗೆ ಕೇಡು ಬಯಸುವವರನ್ನು ದೇವರೇ ತಡೆಯುತ್ತಾನೆ. ಶಿವಾಂಶವುಳ್ಳ ಅಯ್ಯಪ್ಪಸ್ವಾಮಿಯೇ ನಿಮ್ಮನ್ನು ಕಾಪಾಡುತ್ತಾನೆ.
ವೃಶ್ಚಿಕ ರಾಶಿ:
ಈ ರಾಶಿಗೆ ತೃತೀಯದಲ್ಲಿ ಸೂರ್ಯನು, ಸಪ್ತಮದಲ್ಲಿ ಗುರುವು, ಶನಿಯು ಚತುರ್ಥದಲ್ಲಿದ್ದಾನೆ. ಸ್ವಕ್ಷೇತ್ರದಲ್ಲಿ ಶನಿಯಿರುವುದರಿಂದ ನಿಮಗೆ ಹೆಚ್ಚು ತೊಂದರೆ ನೀಡುವುದಿಲ್ಲ. ಇಂದು ಬರುವ ಸಂಪತ್ತು, ಭಾಗ್ಯಗಳು ನಾಳೆ ನಿಮ್ಮ ಕೈಸೇರಬಹುದು. ಕುಮಾರಸ್ವಾಮಿಯನ್ನು ಅರ್ಚಿಸಿ ವಿಶೇಷ ಫಲಗಳಿಸಿ. ಸುಖ-ಸಂತೋಷ ವೃದ್ಧಿಯಾಗುತ್ತದೆ.
ಧನಸ್ಸು ರಾಶಿ:
ಸೂರ್ಯನು ಎರಡನೇ ಮನೆಗೆ ಬಂದು, ಶನಿಯ ಮನೆಯಾದ್ದರಿಂದ, ತೃತೀಯ ಶನಿಯು ಲಾಭಾಂಶ ಕೊಟ್ಟು, ಶುದ್ಧವಾದ ಗಾಳಿ, ಬೆಳಕು, ಧನ, ಕನಕ, ಸುಖ, ಭೋಗ-ಭಾಗ್ಯ, ಮೊಗದಲ್ಲಿ ವಿಶೇಷ ತೇಜಸ್ಸನ್ನು ಕೊಟ್ಟು, ಮಾಡುವ ಕೆಲಸಗಳಲ್ಲಿ ಜಯವನ್ನು ತರುತ್ತಾನೆ. ಸೂರ್ಯಾಷ್ಟೋತ್ತರ ಪಠಿಸಿ. ಆದಿತ್ಯ ಹೃದಯ ಪಾರಾಯಣ ಮಾಡಿಸಿ.
ಮಕರ ರಾಶಿ:
ಈ ರಾಶಿಯವರಿಗೆ ಜನ್ಮಕ್ಕೆ ಸೂರ್ಯನು 14.1. 2025ರಿಂದ ಬಂದು ವಿಶೇಷ ಬೆಳಕು ಕೊಡುತ್ತಾನೆ. ಏಕಾಗ್ರತೆಯಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಭಗವಂತನೇ ಕಾಣುತ್ತಾನೆ. ದೇವರನ್ನೇ ಪ್ರತ್ಯಕ್ಷವಾಗಿ ನೀವು ಮಾಡುವ ಕೆಲಸದಲ್ಲಿ ಕಾಣಬಹುದು. ಸುಖವಾದ ಕಾಲ ಬಂದಿದೆ. ಮಾಸಂಪ್ರತಿ ಸತ್ಯನಾರಾಯಣ ದೇವರ ಪೂಜೆ ತಪ್ಪದೇ ಮಾಡಿರಿ.
ಕುಂಭ ರಾಶಿ:
ದ್ವಾದಶದಲ್ಲಿ ಸೂರ್ಯ ಬಂದಿದ್ದಾನೆ. ಶರೀರ ಭಾದೆ ಕಾಣಿಸಿಕೊಳ್ಳ ಬಹುದು. ಅದಕ್ಕೆ ಏಕೈಕ ಮಂತ್ರ ದೈವ ಕೃಪೆ. ಅದನ್ನು ಧನ್ವಂತರಿಯ ಮೂಲಕ ಪಡೆದು ಆರೋಗ್ಯವಂತರಾಗಬೇಕು. ಜನ್ಮದಲ್ಲಿ ಶನಿ ಇರುವುದರಿಂದ ಬಂದ ಕಷ್ಟ- ಕಾರ್ಪಣ್ಯ ದೂರವಾಗಿ ಗುರುವು ನಿಮ್ಮನ್ನು ರಕ್ಷಿಸಿ, ಪೂರ್ವಾರ್ಜಿತ ಪುಣ್ಯವೂ ಸಹಾಯಕ್ಕೆ ಬಂದು ಸುಖವಾಗಿರುವ ಕಾಲ.
ಮೀನ ರಾಶಿ:
ಏಕಾದಶದಲ್ಲಿ ಸೂರ್ಯನಿದ್ದಾನೆ, ಏಕಾದಶವು ಸೂರ್ಯನು ಲಾಭ- ಸುಖ, ಶ್ರೇಯಸ್ಸು ತರುವ ಮನೆ. ಶನಿಯು ಜನ್ಮಕ್ಕೆ ಬರುತ್ತಾನೆ. ಬಂದರೂ ಗುರುವಿನ ಮನೆಯಾದ್ದರಿಂದ, ನಿಮ್ಮ ಗುರುಗಳ ಆರಾಧನೆ ಮಾಡಿ, ಸಂತೋಷ ಪಡಿಸಿದರೆ ಯಾವ ಭಾದೆಯೂ ಋಣವೂಇಲ್ಲ. ಜಗತ್ತಿನೆಲ್ಲೆಡೆ ಪಾಪ-ಪುಣ್ಯವನ್ನು ಗರುಡನು ಆಕಾಶದಲ್ಲಿ ವೀಕ್ಷಿಸುತ್ತಿರುತ್ತಾನೆ. ಪಾಪ, ಇತರರ ಮನಸ್ಸಿಗೆ ಹಿಂಸೆ, ನೋವು ಮಾಡದೆ ಇದ್ದರೆ, ವಕ್ರೀ ಗುರು ನಿಮ್ಮನ್ನು ಕಾಪಾಡುತ್ತಾನೆ.