Ad Widget .

ತಾಯಿಯ ಬದಲು ಕೆಲಸ ಮಾಡುತ್ತಿದ್ದ ಮಗ ಅರೆಸ್ಟ್; ಲೋಕಾಯುಕ್ತ ದಾಳಿ ವೇಳೆ ಕೇಸ್‌ ವರ್ಕರ್ ಕಳ್ಳಾಟ ಬಯಲು!

ಸಮಗ್ರ ನ್ಯೂಸ್ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮೇಲೆ ನಡೆದ ಲೋಕಾಯುಕ್ತ ದಾಳಿ ವೇಳೆ ಮಹಾ ಮೋಸವೊಂದು ಬೆಳಕಿಗೆ ಬಂದಿದೆ. ತಾಯಿಯ ಹೆಸರಿನಲ್ಲಿ ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಗನನ್ನು ಬಂಧಿಸಲಾಗಿದೆ. ಕೆಂಪೇಗೌಡನಗರ ಸಬ್ ಡಿವಿಷನ್ ಎಸ್‌ಡಿಎ ಆಗಿರುವ ಕವಿತ ಅವರ ಬದಲಾಗಿ ಆಕೆಯ ಪುತ್ರ ನವೀನ್ ಬಿಬಿಎಂಪಿ ಕಚೇರಿಯಲ್ಲಿ ತಾಯಿ ಪರವಾಗಿ ಕರ್ತವ್ಯ ಮಾಡುತಿದ್ದರು.

Ad Widget . Ad Widget .

ಬಿಬಿಎಂಪಿ ಕಚೇರಿಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದ ವೇಳೆ ಕಳ್ಳಾಟ ಬಯಲಾಗಿದೆ. ಅಲ್ಲದೆ ಕರ್ತವ್ಯ ದುರುಪಯೋಗಪಡಿಸಿಕೊಂಡ ಅಧಿಕಾರಿಗಳ ವಿರುದ್ಧ ಕೇಸ್ ಕೂಡ ದಾಖಲಾಗಿದೆ.ಲಾಗಿನ್ ಐಡಿ ನೀಡಿ ಮಗನನ್ನು ಕಳುಹಿಸಿದ್ದ ತಾಯಿ ಬಿಬಿಎಂಪಿ ಕಚೇರಿಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದರು, ಬಿ ವೀರಪ್ಪ ಅವರ ನೇತೃತ್ವದಲ್ಲಿ ಸೌತ್ ಎಂಡ್ ಸರ್ಕಲ್ ಬಳಿಯ ಕಚೇರಿ ಮೇಲೆ ದಾಳಿ ಮಾಡಲಾಗಿತ್ತು. ಪರಿಶೀಲನೆ ವೇಳೆ ಕೇಸ್ ವರ್ಕರ್ ಕವಿತಾ ಅವರು ತಮ್ಮ ಬದಲು ಮಗನನ್ನ ಕೆಲಸಕ್ಕೆ ಕಳಿಸಿರುವುದು ಬೆಳಕಿಗೆ ಬಂದಿದೆ.

Ad Widget . Ad Widget .

ಕಚೇರಿಯ ಲಾಗಿನ್ ಐಡಿ ನೀಡಿ ಮಗನಿಗೆ ಕೆಲಸ ಮಾಡಲು ಬಿಟ್ಟಿದ್ದರು ಎಂದು ಗೊತ್ತಾಗಿದೆ.ಮಗ ನವೀನ್‌ನನ್ನು ಕೆಲಸ ಮಾಡಲು ಕಳುಹಿಸಿ ಕವಿತಾ ಅವರು ಮನೆಯಲ್ಲಿದ್ದರು ಎನ್ನಲಾಗಿದೆ. ಅಲ್ಲದೇ ಗೀತಾ ಎಂಬುವರನ್ನ ಸಹಾಯಕ್ಕಾಗಿ ಅನಧಿಕೃತವಾಗಿ ನೇಮಕ ಮಾಡಿಕೊಂಡಿದ್ದರು. ಅಧಿಕಾರಿಗಳಿಂದ ಕರ್ತವ್ಯ ದುರುಪಗೋಗ ಹಿನ್ನೆಲೆ ಸಿದ್ದಾಪುರ ಠಾಣೆಯಲ್ಲಿ ಮೂವರ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ ಕಚೇರಿ ಮುಖ್ಯಸ್ಥರಾದ ಸುಜಾತ, ಕೇಸ್ ವರ್ಕರ್ ಕವಿತಾ, ಮಗ ನವೀನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ನವೀನ್‌ನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ವ್ಯಾಪ್ತಿಯಲ್ಲಿ ಬಿಬಿಎಂಪಿ ಕೊರೆಸಿದ್ದ ಬೋರ್‌ವೆಲ್‌ನಲ್ಲಿ ಹಗರಣದ ಆರೋಪ ಕೇಳಿಬಂದಿದ್ದು, ಮುಖ್ಯ ಇಂಜಿನಿಯರ್ ಕಚೇರಿ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.ಬಿಬಿಎಂಪಿ ಕಚೇರಿಯಲ್ಲಿ ತಲಾಶ್ ನಡೆಸಿದ್ದ ಇಡಿ ಅಧಿಕಾರಿಗಳು ಮಾಜಿ ಕಾರ್ಪೊರೇಟರ್‌ಗಳಿಗೆ ಶಾಕ್ ನೀಡಿದ್ದರು. ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ಗಳಿಗೆ ಆಯುಕ್ತರ ಮೂಲಕ ಇಡಿ ನೋಟೀಸ್ ಕಳುಹಿಸಿತ್ತು.2015 ರಿಂದ 2019ರ ಅವಧಿಯಲ್ಲಿ ಕೌನ್ಸಿಲ್ ಸದಸ್ಯರಿಗೆ ನೋಟೀಸ್ ನೀಡಲಾಗಿದೆ.

ಬೋರ್‌ವೆಲ್ ಕೊರೆಸಿದೆ ಎನ್ನಲಾದ 43 ವಾರ್ಡ್‌ಗಳ ಕಾರ್ಪೊರೇಟರ್‌ಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ.ಕೌನ್ಸಿಲ್ ಸೆಕ್ರೆಟರಿ ಮೂಲಕ 43 ಮಾಜಿ ಕಾರ್ಪೊರೇಟರ್‌ಗಳ ಮಾಹಿತಿ ಪಡೆದು ನೋಟೀಸ್ ನೀಡಲಾಗಿತ್ತು.ಇದೇ ವೇಳೆ 18 ಅಂಶಗಳನ್ನು ಒಳಗೊಂಡ ಪ್ರಶ್ನಾವಳಿಯನ್ನು ಪಾಲಿಕೆಗೆ ನೀಡಿರುವ ಇಡಿ ಅಧಿಕಾರಿಗಳು, ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕ ದಾಖಲೆ ಹಾಗೂ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದರು. ಇದರ ಜೊತೆಗೆ ಈ ಅವಧಿಯಲ್ಲಿ ಪಾಲಿಕೆ ಜಾರಿ ಮಾಡಿರುವ ಬಜೆಟ್ ವ್ಯವಹಾರದ ಸಂಪೂರ್ಣ ದಾಖಲಾತಿ ನೀಡುವಂತೆಯೂ ಸೂಚನೆ ನೀಡಲಾಗಿತ್ತು.

Leave a Comment

Your email address will not be published. Required fields are marked *