Ad Widget .

ಶರಣಾಗುವವರಿಗೆ ಕೊಡುವ ಪರಿಹಾರ ನಮಗೂ ಕೊಡಿ; ಎನ್ ಕೌಂಟರ್‌ಗೆ ಬಲಿಯಾದ ನಕ್ಸಲ್ ನಾಯಕ ವಿಕ್ರಂ ಗೌಡ ಸಹೋದರಿ ಮನವಿ!

ಸಮಗ್ರ ನ್ಯೂಸ್ : ಕಳೆದ ನವೆಂಬರ್ ತಿಂಗಳು ನಡೆದಿದ್ದ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ನಿಂದ ರಾಜ್ಯದಲ್ಲಿ ನಕ್ಸಲರು ಭಯಭೀತರಾಗಿದ್ದಾರೆ. ಇಂದು ಸುಮಾರು ಆರು ಜನ ನಕ್ಸಲರು ಶರಣಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Ad Widget . Ad Widget .

ಈ ನಡುವೆ ಎನ್‌ಕೌಂಟರ್‌ಗೆ ಬಲಿಯಾಗಿದ್ದ ನಕ್ಸಲ್ ನಾಯಕ ವಿಕ್ರಂ ಗೌಡ ಸಹೋದರಿ ಸುಗುಣ, ಅಣ್ಣನ ಜೀವ ವಾಪಸ್ ಕೊಡೋದಕ್ಕೆ ಸಾಧ್ಯವಿಲ್ಲ ಪರಿಹಾರ ಆದರೂ ನೀಡಿ ಎಂದು ಮನವಿ ಮಾಡಿದ್ದಾರೆ.ನಕ್ಸಲರ ಶರಣಾಗತಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ಸುಗುಣ, ನಾವು ಕಷ್ಟದಲ್ಲಿದ್ದೇವೆ ಸ್ವಂತ ಮನೆಯಾಗಬೇಕಿದೆ. ಒಂದು ದಿನ ಕೆಲಸಕ್ಕೆ ಹೋಗದೆ ಇದ್ದರೆ ನಮ್ಮ ದಿನ ಸಾಗೋದಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.ಸರೆಂಡ‌ರ್ ಆಗುವ ನಕ್ಸಲರಿಗೆ ಕೊಡುವ ಪರಿಹಾರವನ್ನು ನಮಗೂ ಕೊಡಿ ಸಾಕು. ನನ್ನ ಅಣ್ಣನ ಜೀವ ಕೊಡಲು ಸಾಧ್ಯವಿಲ್ಲ.

Ad Widget . Ad Widget .

ಎನ್‌ಕೌಂಟರ್ ಆಗಿದೆ, ಅವರ ಜೀವ ಹೋಗಿಯಾಗಿದೆ. ಉಳಿದವರಿಗೆ ಕೊಡುವ ಪರಿಹರ ನಮಗೆ ಕೊಟ್ಟರೆ ಸಾಕು. ನಾವು ಕಷ್ಟದಲ್ಲಿದ್ದೇವೆ ಎಂದು ಸುಗುಣ ಹೇಳಿದರು.ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ 6 ಜನ ನಕ್ಸಲರು ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಕ್ಸಲ್ ಶರಣಾಗತಿಗೆ ದಿನಾಂಕ ಫಿಕ್ಸ್ ಆಗಿದೆ. ಇಂದು (ಜ.8) ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ನಕ್ಸಲರು ಶರಣಾಗತಿಯಾಗುವ ಸಾಧ್ಯತೆಯಿದೆ. ಇವರು ದಕ್ಷಿಣ ಭಾರತದ 4 ರಾಜ್ಯಗಳಿಗೆ ಬೇಕಾಗಿದ್ದಾರೆ.ಈ ತಂಡದ ನಕ್ಸಲ್ ನಾಯಕಿ ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ ಸೇರಿದಂತೆ ಪ್ರಮುಖ ನಕ್ಸಲರು ಶರಣಾಗತಿಗೆ ಮುಂದಾಗಿದ್ದಾರೆ.

ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ.ಅಲಿಯಾಸ್ ರಮೇಶ, ಆಂಧ್ರಪ್ರದೇಶದ ಮಾರೆಪ್ಪ ಅರೋಲಿ ಶರಣಾಗಲಿದ್ದಾರೆ ಎನ್ನಲಾಗಿದೆ. ಮಾಜಿ ನಕ್ಸಲ್ ನೂರ್ ಜುಕರ್ ಶ್ರೀಧ‌ರ್ ನೇತೃತ್ವದಲ್ಲಿ ಶರಣಾಗತಿಗೆ ಮುಂದಾಗಿದ್ದಾರೆ.ಸರ್ಕಾರ ರಚನೆ ಮಾಡಿರುವ ಜಿಲ್ಲಾ ಕಮೀಟಿ ಮುಂದೆ ನಕ್ಸಲರು ಶರಣಾಗತಿಯಾಗಲಿದ್ದಾರೆ. ಶಾಂತಿಗಾಗಿ ನಾಗರೀಕ ವೇದಿಕೆಯ ಅಡಿಯಲ್ಲಿ ನಕ್ಸಲರು ಶರಣಾಗತಿಯಾಗಲಿದ್ದಾರೆ.ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್.ಪಿ.ವಿಕ್ರಮ ಅಮಟೆ ಮುಂದೆ ಮಾಜಿ ನಕ್ಸಲರು, ನಕ್ಸಲರ ಕುಟುಂಬದವರ ಸಮ್ಮುಖದಲ್ಲಿ ಶರಣಾಗತಿ ಆಗಲಿದ್ದಾರೆ.

ವಿಕ್ರಮ್ ಗೌಡ ಎಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವಂತೆ ಆಗ್ರಹ ಉಡುಪಿಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಬಳಿ ನಡೆದಿದ್ದ ನಕ್ಸಲ್ ನಾಯಕ ವಿಕ್ರಮ್ ಗೌಡ ಎಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ಹೊರಹಾಕಿರುವ ನಕ್ಸಲರು, ಅದೊಂದು ನಕಲಿ ಎನ್‌ಕೌಂಟ‌ರ್ ಎಂದು ಶಾಂತಿಗಾಗಿ ನಾಗರಿಕ ವೇದಿಕೆಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.ವಿಕ್ರಮ್ ಗೌಡ ಎಂಟ‌ರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವಂತೆ ಒತ್ತಾಯಿಸಿದ್ದಾರೆ. ಶಾಂತಿಗಾಗಿ ನಾಗರಿಕ ವೇದಿಕೆಯು ನಕ್ಸಲರ ಬೇಡಿಕೆಯನ್ನ ಸರ್ಕಾರದ ಮುಂದಿಟ್ಟಿದೆ.

ನಕ್ಸಲರ ಬೇಡಿಕೆಯಂತೆ ಎಂಟ‌ರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವ ಭರವಸೆಯನ್ನು ಸರ್ಕಾರ ನೀಡಿದೆ ಎಂದು ಹೇಳಲಾಗಿದೆ.ಕಳೆದ ಕೆಲ ದಿನಗಳ ಹಿಂದೆ ನಕ್ಸಲರ ಶರಣಾಗತಿಗೆ ಸರ್ಕಾರ ಕೇಳಿಕೊಂಡಿತ್ತು.ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಶಾಂತಿ ನೆಲೆಸುವಂತೆ ಮಾಡಲು ಸರ್ಕಾರವು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ. ಆದರೆ, ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮಾತುಕತೆ ನಡೆಸಲು ಮುಂದಾಗಿದ್ದರೆ, ಈ ಪ್ರಕ್ರಿಯೆಯನ್ನು ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸ್ವಾಗತಿಸಿ, ಸಹಾನುಭೂತಿಯಿಂದ ನಡೆದುಕೊಳ್ಳುತ್ತದೆ ಎಂದು ಸಿಎಂ ಕಚೇರಿ ತಿಳಿಸಿತ್ತು.

Leave a Comment

Your email address will not be published. Required fields are marked *