ಸಮಗ್ರ ನ್ಯೂಸ್: ಕಾಝಿರಂಗ ಜ.07 ರಂದು ಭಾರತದ ಜನಪ್ರಿಯ ವನ್ಯಮೃಗಗಳ ಕಾಝಿರಂಗ ರಾಷ್ಟ್ರೀಯ ಅಭಯಾರಣ್ಯ ಇಲ್ಲಿ ಘೇಂಡಾಮೃಗಗಳು ಸೇರಿದಂತೆ ಹಲವು ಪ್ರಾಣಿ ಪಕ್ಷಗಳು ಕಾಣಸಿಗುತ್ತದೆ. ಹೀಗಾಗಿ ಹಲವು ಪ್ರವಾಸಿಗರು ಆ ತಾಣಕ್ಕೆ ತೆರಳುತ್ತಾರೆ. ಹೀಗೆ ಪ್ರವಾಸಕ್ಕೆ ಬಂದ ಕುಟುಂಬ ಸಪಾರಿಗೆ ತೆರಳಿದೆ.
ಬಗೋರಿ ರೇಂಜ್‌ನ ಸಫಾರಿಯಲ್ಲಿ ಪ್ರವಾಸಿಗರು ತೆರಳಿದ್ದಾರೆ. ತೆರೆದ ಜೀಪಿನಲ್ಲಿ ಹಲವು ಪ್ರವಾಸಿಗರು ವನ್ಯ ಮೃಗಗಳ ವೀಕ್ಷಣೆಗೆ ತೆರಳಿದ್ದಾರೆ. ಪ್ರಾಣಿ ಪಕ್ಷಿಗಳನ್ನು ವೀಕ್ಷಿಸುತ್ತಾ ತೆರಳುತ್ತಿದ್ದ ಪ್ರವಾಸಿಗರ ವಾಹನಗಳು ಸಂಕೀರ್ಣ ಜಾಗಕ್ಕೆ ಬರುತ್ತಿದ್ದಂತೆ ಘೇಂಡಾ ಮೃಗಗಳ ಗುಂಪು ಪ್ರತ್ಯಕ್ಷವಾಗಿದೆ.ಪ್ರವಾಸಿಗರು ಘೇಂಡಾ ಮೃಗಗಳನ್ನು ನೋಡಿ ಪುಳಕಿತರಾಗಿದ್ದಾರೆ. ಘೇಂಡಾ ಮೃಗಗಳ ಗುಂಪು ಪ್ರವಾಸಿಗ ವಾಹನಗಳನ್ನು ನೋಡುತ್ತಿದ್ದಂತೆ ರೊಚ್ಚಿಗೆದ್ದಿದೆ. ತಕ್ಷಣವೇ ದಾಳಿಗೆ ಸಜ್ಜಾಗಿದೆ. ಹೀಗಾಗಿ ಎಲ್ಲಾ ಪ್ರವಾಸಿಗರ ವಾಹನ ನಿಂತಲ್ಲೇ ನಿಂತಿದೆ. ಇತ್ತ ಘೇಂಡಾ ಮೃಗಗಳು ಕಾಲು ಕೆರೆದು ದಾಳಿಗೆ ಮುಂದಾಗಿತ್ತು.
ಇದರ ನಡುವೆ ಒಂದು ವಾಹನದ ಮೇಲೆ ದಾಳಿಗೆ ಮುಂದಾದಾಗ, ವಾಹನವನ್ನು ರಿವರ್ಸ್ ಮಾಡಲಾಗಿದೆ. ಅಷ್ಟರಲ್ಲೇ ಮುಂದೆ ನಿಂತಿದ್ದ ಕೆಲ ವಾಹನಗಳು ಅತೀ ವೇಗವಾಗಿ ತಿರುಗಿಸಿ ಸಾಗಿದೆ. ಆಧರೆ ವೇಗವಾಗಿ ತಿರುಗಿಸಿದ ಕಾರಣ ತೆರೆದ ಸಫಾರಿ ಜೀಪಿನಲ್ಲಿದ್ದ ತಾಯಿ ಹಾಗೂ ಮಗಳು ಇಬ್ಬರು ನೆಲಕ್ಕೆ ಬಿದ್ದಿದ್ದಾರೆ.ಬಿದ್ದ ರಭಸದಲ್ಲಿ ಇಬ್ಬರಿಗೂ ಸಣ್ಣಪುಟ್ಟ ಗಾಯವಾಗಿದೆ. ತಕ್ಷಣ ಮೇಲೇಳಲು ಸಾಧ್ಯವಾಗಿಲ್ಲ. ಬಿದ್ದಲ್ಲಿಂದ ಎದ್ದ ತಾಯಿ ಮಗಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಇಬ್ಬರಿಗೂ ಸರಿಯಾಗಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಸಹಾಯಕ್ಕಾಗಿ ಕೂಗಿ ಕೊಂಡಿದ್ದಾರೆ.ಆದರೆ ಹಿಂದೆ ಹಿದ್ದ ಸಫಾರಿ ಜೀಪ್ ತಕ್ಷಣ ರಿವರ್ಸ್ ಗೇರ್ ಮೂಲಕ ಆಗಮಿಸಿ ತಾಯಿ ಹಾಗೂ ಮಗಳು ಇಬ್ಬರನ್ನು ರಕ್ಷಿಸಿದೆ.
ಇತ್ತ ಘೇಂಡಾ ಮೃಗ ಇನ್ನೇನು ಹತ್ತಿರ ಬರಬೇಕು ಅನ್ನುವಷ್ಟರಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಹೀಗಾಗಿ ತಾಯಿ ಹಾಗೂ ಮಗಳು ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಇದರ ಬೆನ್ನಲ್ಲೇ ಕಾಝಿರಂಗ ರಾಷ್ಟ್ರೀಯ ಉದ್ಯಾನವನ ಅಧಿಕಾರಿಗಳು ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ. ಪ್ರವಾಸಿಗರು ಸಿಬ್ಬಂದಿಗಳ ಮೇಲೆ ಆರೋಪ ಮಾಡಿದ್ದಾರೆ. ಘೇಂಡಾ ಮೃಗದ ಬಳಿಕವಾಹನ ನಿಲ್ಲಿಸಲಾಗಿತ್ತು. ಬಳಿಕ ಯಾವುದೇ ಸೂಚನೆ ನೀಡಲಿಲ್ಲ. ಏಕಾಏಕಿ ಒಂದೇ ರಭಸದಲ್ಲಿ ವಾಹನ ತಿರುಗಿಸಿದ್ದಾರೆ.
ಇತ್ತ ಸಿಬ್ಬಂದಿಗಳು ಪ್ರವಾಸದ ವೇಳೆ ಸಫಾರಿ ಮಾಡುವಾಗ ಪ್ರವಾಸಿಗರು ಹೇಗೆ ಇರಬೇಕು, ಏನು ಮಾಡಬೇಕು, ಮಾಡಬಾರದು ಅನ್ನೋ ಮಾರ್ಗಸೂಚಿ ಫಲಕಗಳು ಎಲ್ಲಾ ಕಡೆ ಇದೆ. ಈ ಕುರಿತು ಆರಂಭದಲ್ಲೇ ಸೂಚನೆ ನೀಡಲಾಗುತ್ತದೆ. ಹೀಗಾಗಿ ಪ್ರವಾಸಿಗರು ವನ್ಯ ಪ್ರಾಣಿಗಳ ವೀಕ್ಷಣೆ ಮಾಡಿ ಆನಂದಿಸಿ, ಮೊಬೈಲ್ ಹಿಡಿದು ಫೋಟೋ, ವಿಡಿಯೋ ಸೆರೆಹಿಡಿಯಲು ಹೋದಾಗ ಈ ರೀತಿ ಆಗಿದೆ ಎಂದಿದ್ದಾರೆ.