ಕಾಸರಗೋಡು: ಕರ್ನಾಟಕದ ಆಸ್ಪತ್ರೆಗಳಿಗೆ ತೆರಳುವ ರೋಗಿಗಳನ್ನು ಗಡಿಯಲ್ಲಿ ತಡೆಯದಂತೆ ಕೇರಳ ಹೈಕೋರ್ಟ್ ಕರ್ನಾಟಕಕ್ಕೆ ಆದೇಶ ನೀಡಿದೆ.
ಈ ಕುರಿತು ಮಂಗಳವಾರ ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್ ಅಗತ್ಯ ದಾಖಲೆಗಳು ಇದ್ದಲ್ಲಿ ಆಸ್ಪತ್ರೆಗೆ ತೆರಳುವ ವರನ್ನು ತಡೆಯುವಂತಿಲ್ಲ. ಅಂಬ್ಯುಲೆನ್ಸ್, ಖಾಸಗಿ ವಾಹನಗಳಲ್ಲಿ ತೆರಳುವ ರೋಗಿಗಳನ್ನು ತಡೆಯಬಾರದು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣವನ್ನು ಆಗಸ್ಟ್ 25 ರಂದು ಮತ್ತೆ ವಿಚಾರಣೆಗೆ ಬರಲಿದೆ. ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಕೇಂದ್ರ, ಕೇರಳ, ಕರ್ನಾಟಕ ಸರಕಾರಗಳು ಸೇರಿದಂತೆ ಎಂಟು ಕಕ್ಷಿದಾರರಿಗೆ ಹೈಕೋರ್ಟ್ ನೋಟಿಸ್ ನೀಡಿದೆ.
ಕೇರಳದಲ್ಲಿ ಕೊರೋನಾ ಸೋಂಕಿನ ನೆಪದಲ್ಲಿ ಕೇರಳಿಗರಿಗೆ ವಿಧಿಸಿರುವ ನಿರ್ಬಂಧದ ಹಿನ್ನಲೆಯಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆಸ್ಪತ್ರೆ ಅಲ್ಲದೆ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಖಾಯಂ ಆಗಿ ತೆರಳುವ ವರಿಗೆ ತೊಂದರೆ ಕೊಡಬಾರದು ಎಂದು ಆದೇಶದಲ್ಲಿ ತಿಳಿಸಿದೆ. ಅರ್ಜಿದಾರರ ಪರ ಪಿ. ವಿ ಅನೂಪ್, ಸೀಜೋ ಪ್ರತಿಷ್, ಜಿ. ಚಂದ್ರ ಮೋಹನ್ ಮೋಹನ್ ಹಾಜರಾಗಿದ್ದರು.