ಸಮಗ್ರ ನ್ಯೂಸ್: ರೇಪ್ ಮಾಡಿದ ವ್ಯಕ್ತಿಯ ಜತೆ ಪೊಲೀಸರು ಯುವತಿಗೆ ಬಲವಂತವಾಗಿ ಮದುವೆ ಮಾಡಿಸಿದ ಘಟನೆ ಉತ್ತರ ಪ್ರದೇಶದ ಬದೊಹಿಯಲ್ಲಿ ನಡೆದಿದೆ. 19 ವರ್ಷದ ಯುವತಿಯನ್ನ ವ್ಯಕ್ತಿ ಯೋರ್ವ ಅನೇಕ ಬಾರಿ ರೇಪ್ ಮಾಡಿದ್ದಾನೆ. ಈ ಬಗ್ಗೆ ಕಂಪ್ಲೇಂಟ್ ಕೊಡಲು ಯುವತಿ ತನ್ನ ಪೋಷಕರ ಜತೆ ಸ್ಟೇಷನ್ ಗೆ ತೆರಳಿದ್ದಾರೆ.
ಈ ವೇಳೆ ಯುವತಿ ಗರ್ಭ ಧರಿಸುವ ಸಾಧ್ಯತೆ ಜಾಸ್ತಿಯಿದ್ದು, ರೇಪ್ ಮಾಡಿದ ವ್ಯಕ್ತಿಯನ್ನೇ ಮದುವೆ ಆಗುವಂತೆ ಒತ್ತಾಯಿಸಿದ್ದಾರೆ.ಅಲ್ಲದೆ ಪೊಲೀಸರು ಮುಂದೆ ನಿಂತು ಬಲವಂತವಾಗಿ ಆತನ ಜತೆ ಮದುವೆ ಮಾಡಿದ್ದಾರೆ. ಇದೀಗ ಯುವತಿಗೆ ವಿವಾಹವಾಗಲು ಇಷ್ಟ ಇರಲಿಲ್ಲ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.ಮದುವೆಯಾದ ಬಳಿಕ ರೇಪ್ ಮಾಡಿದ್ದ ವ್ಯಕ್ತಿಗೆ ಮುಂಚಿತವಾಗಿಯೇ ಮದುವೆ ಆಗಿರೋದು ಗೊತ್ತಾಗಿದೆ.ಸೂಕ್ತ ತನಿಖೆ ನಡೆಸದೆ ಒತ್ತಾಯಪೂರ್ವಕ ವಾಗಿ ಮದುವೆ ಮಾಡಿಸಲಾಯ್ತು ಎಂದು ಯುವತಿ ಆರೋಪಿಸಿದ್ದಾರೆ.