ಸಮಗ್ರ ನ್ಯೂಸ್: ನಿರ್ಬಂಧಿತ ಸ್ಥಳದಲ್ಲಿ ಧರಣಿ ನಡೆಸಿದ ಜನ್ ಸೂರಾಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರನ್ನು ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಅನಿರ್ದಿಷ್ಟಾವಧಿ ಮುಷ್ಕರ ನಿರತರಾಗಿದ್ದ ಕಿಶೋರ್ ಅವರನ್ನು ಪಾಟ್ನಾ ಪೊಲೀಸರು ವಶಕ್ಕೆ ಪಡೆದಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಬಂಧಿಸಲಾಗಿದೆ.
ಬಿಪಿಎಸ್‌ಸಿ ಪರೀಕ್ಷೆ ಪತ್ರಿಕೆ ಸೋರಿಕೆ ಆರೋಪದ ವಿರುದ್ದ ಕ್ರಮ ಕೈಗೊಳ್ಳುವಂತೆ ಕೋರಿ ಪ್ರಶಾಂತ್ ಕಿಶೋರ್ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಗಾಂಧಿ ಮೈದಾನವನ್ನೂ ಪೊಲೀಸರು ತೆರವು ಮಾಡಿದ್ದಾರೆ.ಚುನಾವಣಾ ತಂತ್ರಗಾರ-ರಾಜಕೀಯ ನಾಯಕ ಪ್ರಶಾಂತ್ ಕಿಶೋರ್ ಜನವರಿ 2 ರಿಂದ BPSC 70 ನೇ CCE ಪರೀಕ್ಷೆಯ ಪೇಪರ್ ಸೋರಿಕೆ ಮತ್ತು ಇತರ ಅಕ್ರಮಗಳ ಆರೋಪದ ಮೇಲೆ ರದ್ದುಗೊಳಿಸುವಂತೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಪಾಟ್ನಾ ಪೊಲೀಸರು ಅವರನ್ನು ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ದಿದ್ದಾರೆ. ಪ್ರಶಾಂತ್ ಕಿಶೋರ್ ಗೆ ಪೊಲೀಸರು ಕಪಾಳಮೋಕ್ಷ ಮಾಡಿದ್ದಾರೆ ಎಂದು ಜನ್ ಸೂರಜ್ ಪಕ್ಷ ಆರೋಪಿಸಿದೆ.