Ad Widget .

ಒಂದೆಡೆ ಸಾವರ್ಕರ್ ರಥಯಾತ್ರೆ, ಮತ್ತೊಂದೆಡೆ ಆರೋಪಿಗಳಿಗೆ ಜಾಮೀನು- ಇದೆಂಥಾ ವಿಪರ್ಯಾಸ…!?

ಪುತ್ತೂರು: ಕಬಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಸಾವರ್ಕರ್ ಫೋಟೊ ಇದ್ದ ವಾಹನವನ್ನು ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.
ಕಬಕ ಗ್ರಾಮ ಪಂಚಾಯತ್ ವತಿಯಿಂದ ನಡೆಸಲಾಗಿದ್ದ ಸ್ವರಾಜ್ಯ ರಥ ಯಾತ್ರೆಯಲ್ಲಿ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಿರುವುದನ್ನು ಆಕ್ಷೇಪಿಸಿ ರಥ ಯಾತ್ರೆ ತಡೆದು ಪ್ರತಿಭಟನೆ ವ್ಯಕ್ತಪಡಿಸಿದ್ದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಅಜೀಜ್ (43), ಶಮೀರ್ ಮುರ (40) ಹಾಗೂ ಕೊಡಿಪ್ಪಾಡಿ ಗ್ರಾಮದ ಅಬ್ದುಲ್ ರಹಿಮಾನ್‌ ಅವರನ್ನು ಪುತ್ತೂರು ನಗರ ಠಾಣೆ ಪೊಲೀಸರು ಆಗಸ್ಟ್ 15 ರಂದು ಬಂಧಿಸಿದ್ದರು.

Ad Widget . Ad Widget . Ad Widget .

ಕಬಕ ಗ್ರಾಮ ಪಂಚಾಯತ್ ನ ಪಿಡಿಓ ಆಗಿರುವ ಆಶಾ ಅವರು ಈ ಆರೋಪಿಗಳು ಕೋವಿಡ್ 19 ರ ನಿಯಾಮವಳಿಯನ್ನು ಉಲ್ಲಂಘಿಸಿ 75 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸದಂತೆ ಸಾರ್ವಜನಿಕ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪಂಚಾಯತ್ ಅಧ್ಯಕ್ಷರನ್ನು ಕೈಯಿಂದ ದೂಡಿ, ಭಾರತ ಮಾತೆಯ ಭಾವಚಿತ್ರವನ್ನು ಹಾನಿಗೊಳಿಸಿ, ಸಾರ್ವಜನಿಕ ಆಸ್ತಿಗೆ ಹಾನಿಯನ್ನು ಉಂಟು ಮಾಡಿದ್ದಾರೆ ಎಂದು ನೀಡಿದ್ದ ದೂರಿನ ಮೇರೆಗೆ ಅಜೀಜ್, ನೌಷದ್, ಶಮೀರ್, ಹಾರೀಸ್, ಅದ್ದು, ತೌಸೀಫ್, ಶಾಫಿ ಸೇರಿದಂತೆ ಹಲವರ ವಿರುದ್ದ ಪ್ರಕರಣ ದಾಖಲಾಗಿದ್ದರೂ ಕೇವಲ ಮೂವರನ್ನು ಬಂಧಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಕೆರಳಿ ಇಂದು ಕಬಕ ಚಲೋ ‘ವೀರ ಸಾವರ್ಕರ್ ರಥಯಾತ್ರೆ’ ಆಯೋಜಿಸಿದ್ದರು. ಅತ್ತ ರಥಯಾತ್ರೆ ಪ್ರತಿಭಟನೆ ಜೋರಾಗಿಯೇ ನಡೆಯುತ್ತಿದ್ದಾಗಲೇ ಈ ಕಡೆ ಆರೋಪಿಗಳು ಬಂಧನವಾದ ಕೇವಲ 48 ಗಂಟೆಗಳ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ವಿವಾದದ ಕಿಡಿ ಹಬ್ಬಿಸಿದ ಆರೋಪಿಗಳನ್ನು ಬಿಡುಗಡೆಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ಕೆಂಗಣ್ಣಿಗೆ ಗುರಿಯಾಗಿದೆ.

Leave a Comment

Your email address will not be published. Required fields are marked *