Ad Widget .

ಕೊಳವೆಬಾವಿಗೆ ಬಿದ್ದಿದ್ದ ಮಗು ಪವಾಡ ಸದೃಶ ಪಾರು| 9 ದಿನಗಳ ಬಳಿಕ ಬದುಕಿ ಬಂದ ಚೇತನಾ

ಸಮಗ್ರ ನ್ಯೂಸ್: ರಾಜಸ್ಥಾನದ ಕೊಟ್‌ಪುಟ್ಲಿಯಲ್ಲಿ 9 ದಿನಗಳ ಹಿಂದೆ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಚೇತನಾ ಎಂಬ ಮಗುವನ್ನು ಕೊನೆಗೂ ಇಂದು ರಕ್ಷಿಸಲಾಗಿದೆ. ಡಿಸೆಂಬರ್ 23ರಂದು ಆ ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಾಗ ತೋಟದಲ್ಲಿದ್ದ ಕೊಳವೆ ಬಾವಿಯೊಳಗೆ ಬಿದ್ದಿದ್ದಳು.

Ad Widget . Ad Widget .

ಆಕೆ ಕೊಳವೆ ಬಾವಿಗೆ ಬಿದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣ ಆರಂಭಿಸಲಾಗಿತ್ತು. ಆದರೆ, ಆ ಕಾರ್ಯಾಚರಣೆ ಅತ್ಯಂತ ಕಠಿಣವಾಗಿತ್ತು. ಚೇತನಾ ಡಿಸೆಂಬರ್ 23ರಿಂದ 150 ಅಡಿ ಆಳದ ಬೋರ್‌ವೆಲ್‌ನಲ್ಲಿ ಸಿಲುಕಿಕೊಂಡಿದ್ದಳು. ಕೂಡಲೇ NDRF ಮತ್ತು SDRF ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಆ ಕೊಳವೆ ಬಾವಿಗೆ ಸಮಾನಾಂತರ ಸುರಂಗ ಕೊರೆಯಲು ತಂಡಗಳು ಹಗಲಿರುಳು ಶ್ರಮಿಸಿದ್ದವು.

Ad Widget . Ad Widget .

ರಾಜಸ್ಥಾನ ರಾಜ್ಯದಲ್ಲಿಯೇ ಸುದೀರ್ಘವಾದ ರಕ್ಷಣಾ ಕಾರ್ಯಾಚರಣೆಗಳಲ್ಲಿ ಇದು ಕೂಡ ಒಂದು. ಈ ಕಾರ್ಯಾಚರಣೆ 160 ಗಂಟೆಗಳ ಕಾಲ ನಡೆಯಿತು. ಆ ಮಗುವಿನ ಕುಟುಂಬಸ್ಥರು ತಮ್ಮ ಮಗುವನ್ನು ಜೀವಸಹಿತ ಉಳಿಸಿಕೊಡಿ ಎಂದು ಜಿಲ್ಲಾಡಳಿತ, ಪೊಲೀಸರ ಎದುರು ಗೋಗರೆದಿದ್ದರು. ಜಿಲ್ಲಾಡಳಿತ ಕಾರ್ಯಾಚರಣೆಯಲ್ಲಿ ನಿರ್ಲಕ್ಷ್ಯ ಮಾಡಿದೆ ಎಂದು ಅವರು ಹತಾಷೆಯಿಂದ ಆರೋಪಿಸಿದ್ದರು. ಮತ್ತೊಂದೆಡೆ ಆಡಳಿತವು ಇದು ಕಠಿಣ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ಹೇಳಿಕೊಂಡಿತ್ತು. ಹೀಗಾಗಿ, ಮಗು 9 ದಿನಗಳ ಬಳಿಕ ಬದುಕಿ ಮೇಲೆ ಬರುತ್ತದೆ ಎಂಬ ನಂಬಿಕೆಯೇ ಜನರಲ್ಲಿ ಇರಲಿಲ್ಲ. ಆದರೆ, ಆ ಮಗುವಿನ ಅದೃಷ್ಟ ಚೆನ್ನಾಗಿತ್ತು. ಕೇವಲ 3 ವರ್ಷದ ಮಗು 9 ದಿನಗಳ ಕಾಲ 150 ಅಡಿ ಆಳದ ಕೊಳವೆ ಬಾವಿಯಲ್ಲಿ ಆಹಾರವಿಲ್ಲದೆ ಬದುಕುಳಿದಿದೆ.

Leave a Comment

Your email address will not be published. Required fields are marked *