Ad Widget .

ಬಿಜೆಪಿ ಶಾಸಕ ಯತ್ನಾಳ್ – ಸಚಿವ ಜಮೀರ್ ಮಾತುಕತೆ: ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರ ರಿಯಾಕ್ಷನ್ ಏನು

ಸಮಗ್ರ ನ್ಯೂಸ್: ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಜಮೀರ್ ಅಹಮದ್‌ಖಾನ್‌ ಇಬ್ಬರು ಭೇಟಿಯಾಗಿದ್ದು,ಕುತೂಹಲ ಮೂಡಿಸಿದೆ. ಸದನದ ಒಳಗೆ ಹಾಗೂ ಸದನದ ಹೊರಗೆ ಗುದ್ದಾಡುವ ಜಮೀರ್ ಹಾಗೂ ಯತ್ನಾಳ್ ಇಬ್ಬರೂ ಭೇಟಿ ಮಾಡಿದ್ದು, ಇಬ್ಬರು ನಗುತ್ತಿರುವ ಪೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಜಮೀರ್ ಹಾಗೂ ಯತ್ನಾಳ್ ಇಬ್ಬರೂ ಒಬ್ಬರ ಹೆಸರನ್ನು ಕೇಳಿದರೂ ಕೆಂಡಾಮಂಡಲರಾಗುತ್ತಿದ್ದರು. ಈ ರೀತಿ ಇರುವಾಗಲೇ ಇಬ್ಬರು ಭೇಟಿ ಮಾಡಿರುವ ಪೋಟೋಗಳು ಎಲ್ಲಾ ಕಡೆ ವೈರಲ್ ಆಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಶಾಸಕ ಯತ್ನಾಳ್ ಹಾಗೂ ಜಮೀರ್ ಇಬ್ಬರೂ ಏಕವಚನದಲ್ಲಿ ಬೈದಾಡಿಕೊಂಡಿರುವುದು ಸಹ ಇದೆ.ಈ ನಡುವೆ ಡಿ. 17 ರಂದು ಎಲ್ಲರೂ ಅಚ್ಚರಿಪಡುವಂತೆ ಇಬ್ಬರು ನಾಯಕರು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಇಬ್ಬರು ನಗುತ್ತಿರುವ ಪೋಟೋಗಳನ್ನು ನೋಡಿ ಜನ ಶಾಕ್ ಆಗಿದ್ದಾರೆ.

Ad Widget . Ad Widget . Ad Widget .

ಈ ಪೋಟೋಗಳನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸಚಿವ ಜಮೀರ್ ಅವರು ಹಂಚಿಕೊಂಡಿದ್ದಾರೆ.ಜಮೀರ್ ಹಾಗೂ ಯತ್ನಾಳ್ ಇಬ್ಬರಲ್ಲೂ ರಾಜಕೀಯ ಭಿನ್ನತೆ ಹಾಗೂ ಸಿದ್ಧಾಂತ ವಿರೋಧ ಇದೆ. ಸಿದ್ಧಾಂತ ಭಿನ್ನಾಭಿಪ್ರಾಯ ಹಾಗೂ ವಕ್ಸ್ ಆಸ್ತಿ ವಿಚಾರವಾಗಿ ಇಬ್ಬರು ಸಹ ಏಕವಚನದಲ್ಲೇ ಬೈದಾಡಿಕೊಳ್ಳುವುದು ಸಹ ಇದೆ. ಇಬ್ಬರೂ ಒಬ್ಬರನ್ನು ಒಬ್ಬರು ನೋಡಿದರೆ ಕೆಂಡಾಮಂಡಲರಾಗುತ್ತಾರೆ. ಈ ರೀತಿ ಇರುವಾಗಲೇ ಇಬ್ಬರೂ ಅಪ್ಪಪಕ್ಕ ಕುಳಿತು ಮಾತನಾಡಿಕೊಂಡು ನಕ್ಕಿದ್ದಾರೆ.

ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಬಿಜೆಪಿ ಶಾಸಕ ಯತ್ನಾಳ್ ಯಾವ ಕಾರಣಕ್ಕೆ ಭೇಟಿಯಾದರೂ, ಏನೆಲ್ಲ ಚರ್ಚೆ ಮಾಡಿದ್ದಾರೆ ಎನ್ನುವುದು ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಇದಕ್ಕೆ ಜಮೀರ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇಂದು ಕ್ಷೇತ್ರದ ಅಭಿವೃದ್ಧಿ ಯೋಜನೆ ಕುರಿತು ಚರ್ಚಿಸಿದರು ಎಂದು ಹೇಳಲಾಗಿದೆ.ಇನ್ನು ಈ ಪೋಟೋ ನೋಡಿ ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ರಾಜಕೀಯ ನಾಯಕರು ಒಂದಾಗುತ್ತಾರೆ. ನಾವು ಕಾರ್ಯಕರ್ತರು ಬದ್ಧವೈರಿಗಳಾಗುತ್ತೇವೆ ಎಂದಿದ್ದಾರೆ.

ನಾವು ಪಕ್ಷ ಹಾಗೂ ನಾಯಕರು ಅಂತ ಕಿತ್ತಾಡಿಕೊಳ್ಳುತ್ತೇವೆ. ಆದರೆ, ಇವರು ಈ ರೀತಿ ಒಂದಾಗುತ್ತಾರೆ ಎನ್ನುವ ಕಾಮೆಂಟ್‌ಗಳು ಈ ಪೋಟೋಗೆ ಬಂದಿವೆ.ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಯತ್ನಾಳ್ ಅವರು ಸದನದಲ್ಲಿ ವಾಕ್ಸಮರ ನಡೆಸಿದ್ದರು. ಅಲ್ಲದೇ ಜಮೀರ್ ಅವರ ಸ್ಟೈಲ್‌ನಲ್ಲಿ ಯತ್ನಾಳ್ ಕಾಮಿಡಿ ಸಹ ಮಾಡಿದ್ದರು. ಯತ್ನಾಳ್ ಸರ್ ನಾಳೆ ನನ್ನ ಚೇಂಬರ್‌ಗೆ ಬನ್ನಿ ಅಂತ ಜಮೀರ್ ಅವರು ಯತ್ನಾಳ್ ಅವರಿಗೆ ಒಪನ್ ಆಹ್ವಾನ ಸಹ ಕೊಟ್ಟಿದ್ದರು. ಇದರ ಬೆನ್ನಲ್ಲೇ ಜಮೀರ್ ಅವರನ್ನು ಯತ್ನಾಳ್ ಅವರು ಭೇಟಿ ಮಾಡಿದ್ದಾರೆ.

Leave a Comment

Your email address will not be published. Required fields are marked *