ಸಮಗ್ರ ನ್ಯೂಸ್: ಲಂಚ ಅನ್ನೋದು ಸಮಾಜದಲ್ಲಿ ವಿಷಜಂತುಗಳ ರೀತಿ ದಿನೇ ದಿನೇ ಹೆಚ್ಚಿದೆ. ಕಾಸು ಕೊಡದಿದ್ರೆ ಸರ್ಕಾರಿ ಫೈಲ್ ಗಳು ಟೇಬಲ್ ನಿಂದ ಮುಂದಿಕ್ಕೆ ಸಾಗೋದೇ ಇಲ್ಲ. ಡೈರೆಕ್ಟ್ ಆಗಿ ಹಣ ಸ್ವೀಕರಿಸೋದಕ್ಕೆ ಹೆದರುವ ಅಧಿಕಾರಿಗಳು ಈಗ ಡಿಜಿಟಲ್ ಮಾರ್ಗದ ಮೊರೆ ಹೋಗಿದ್ದಾರೆ.
ಫೋನ್ ಪೇ ಹಾಗೂ ಗೂಗಲ್ ಪೇ ಮೂಲಕ ಲಂಚ ಪಡೆಯುವವರ ಸಂಖ್ಯೆ ಹೆಚ್ಚಿದ್ದು, ಕಲಬುರಗಿಯಲ್ಲಿ PDO ಅಧಿಕಾರಿಯೊಬ್ಬರು ತಗ್ಲಾಕೊಂಡಿದ್ದಾರೆ.ಕವಲಗಾ ಗ್ರಾಮ ಪಂಚಾಯ್ತಿಯ ಪಿಡಿಓ ಪ್ರೀತಿ ರಾಜ್ ಲೋಕಾಯುಕ್ತರ ಕೈಲಿ ಸಿಕ್ಕಿಹಾಕಿಕೊಂಡಿದ್ದು, ಪಂಪ್ ಆಪರೇಟರ್ ಗುರುಸಿದ್ದಯ್ಯ ಎಂಬುವವರಿಂದ 17 ಸಾವಿರ ಹಣ ಪಡೆಯುವಾಗ ಸಿಲುಕಿದ್ದಾರೆ. ತಮ್ಮ ನಂಬರ್ ಗೆ ಹಣವನ್ನ ಪ್ರೀತಿ ಟ್ರಾನ್ಸರ್ ಮಾಡಿಸಿಕೊಂಡಿದ್ದು, ಪೊಲೀಸರ ಕೈಗೆ ಸಿಲುಕಿದ್ದಾರೆ.
ಲೋಕಾಯುಕ್ತ ಇನ್ಸ್ ಪೆಕ್ಟರ್ ಅರುಣ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪಂಪ್ ಆಪರೇಟರ್ ಕೆಲಸಕ್ಕೆ ಪುನಃ ಸೇರಿಸಿಕೊಳ್ಳಲು ಹಾಗೂ ಬಾಕಿಯಿರುವ 6 ತಿಂಗಳ ವೇತನ ಮಂಜೂರು ಮಾಡಲು 17 ಸಾವಿರ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ಫೋನ್ ಪೇ ಮೂಲಕ ಟ್ರಾನ್ಸರ್ ಮಾಡೋಕೆ ಸೂಚಿಸಿದ್ದರು. ಈ ಬಗ್ಗೆ ಗುರುಸಿದ್ದಯ್ಯ ಕಂಪ್ಲೇಂಟ್ ಕೊಟ್ಟಿದ್ದರು. ಕಾರ್ಯಾಚರಣೆ ನಡೆಸಿದ ತಂಡ ಪ್ರೀತಿ ರಾಜ್ ರನ್ನ ವಶಕ್ಕೆ ಪಡೆದಿದೆ.