Ad Widget .

ತೆಲುಗು ಬಿಗ್ ಬಾಸ್ ವಿನ್ನರ್ ಆಗಿ ಕನ್ನಡಿಗ ನಿಖಿಲ್ ಮಲಿಯಕ್ಕಲ್

ಸಮಗ್ರ ನ್ಯೂಸ್: ತೆಲುಗು ಬಿಗ್‌ಬಾಸ್‌ ಸೀಸನ್‌ 8ರ ವಿನ್ನರ್‌ ಆಗಿ‌ ನಿಖಿಲ್ ಮಲಿಯಕ್ಕಲ್ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಗ್ರ್ಯಾಂಡ್‌ ಫಿನಾಲೆಯಲ್ಲಿ ನಿಖಿಲ್ ಅವರನ್ನು ವಿನ್ನರ್‌ ಎಂದು ಘೋಷಿಸಲಾಗಿದೆ. ಶೋ ನಡೆಸಿಕೊಟ್ಟ ನಟ ಅಕ್ಕಿನೇನಿ ನಾಗಾರ್ಜುನ್‌ ಹಾಗೂ ವಿಶೇಷ ಅತಿಥಿಯಾಗಿ ಆಗಮಿಸಿದ್ದ ನಟ ರಾಮ್‌ ಚರಣ್‌ ಅವರ ಸಮ್ಮುಖದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆಯಾಗಿದೆ.

Ad Widget . Ad Widget .

ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಅವರು ಬಿಗ್‌ಬಾಸ್‌ ವಿಜೇತರನ್ನು ಘೋಷಿಸಿದರು. ಉಗುರು ಕಚ್ಚುವ ಸ್ಪರ್ಧೆಯಲ್ಲಿ ಸಹ ಫೈನಲಿಸ್ಟ್ ಗೌತಮ್ ಕೃಷ್ಣ ವಿರುದ್ಧ ನಿಖಿಲ್ ಜಯಗಳಿಸಿದ್ದರು. ಕೊನೆಗೆ ವೋಟಿಂಗ್‌ನಲ್ಲೂ ನಿಖಿಲ್ ಅವರನ್ನು ಮುನ್ನಡೆ ಸಾಧಿಸಿ ಗೌತಮ್‌ ಅವರನ್ನು ರನ್ನರ್‌ ಅಪ್‌ ಮಾಡುವಲ್ಲಿ ಯಶಸ್ವಿಯಾದರು.

Ad Widget . Ad Widget .

ತೆಲುಗು ಬಿಗ್‌ಬಾಸ್‌ ಸೀಸನ್‌ 8ರ ವಿನ್ನರ್‌ ಜೊತೆಗೆ 55 ಲಕ್ಷ ರೂಪಾಯಿ ನಗದು ಬಹುಮಾನವನ್ನು ನಿಖಿಲ್‌ಗೆ ನೀಡಲಾಗಿದೆ. ಇದರ ಜೊತೆಗೆ ನಿಖಿಲ್‌ಗೆ ಮಾರುತಿ ಸುಜುಕಿ ಬ್ರಾಂಡ್ ನ್ಯೂ ಡಿಜೈರ್ ಕಾರು ಕೂಡ ಸಿಕ್ಕಿದೆ. ಈ ಕಾರಿನ ಬೆಲೆ ಸುಮಾರು 6 ಲಕ್ಷಕ್ಕೂ ಹೆಚ್ಚು ಎಂದು ಹೇಳಲಾಗಿದೆ. ಕರ್ನಾಟಕದ ಮೈಸೂರು ಮೂಲದವರಾದ ನಿಖಿಲ್ ಮಲಿಯಕ್ಕಲ್ 1997ರಲ್ಲಿ ಜನಿಸಿದರು. ಇವರು ದಕ್ಷಿಣ ಭಾರತದ ಕಿರುತೆರೆ ನಟ, ಕನ್ನಡ ಹಾಗೂ ತೆಲುಗು ಟಿವಿ ಕಾರ್ಯಕ್ರಮಗಳಲ್ಲಿ ಹಲವು ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

Leave a Comment

Your email address will not be published. Required fields are marked *