Ad Widget .

ಜನಸೇವೆ ಅಂದ್ರೆ ಇದಪ್ಪಾ! ಈ ಆಸ್ಪತ್ರೆಗೆ ಹಣಪವಾತಿ ಕೌಂಟರೇ ಇಲ್ಲ, ವಿಶ್ವದರ್ಜೆಯ ನೇತ್ರ ಚಿಕಿತ್ಸೆ ಸಂಪೂರ್ಣ ಉಚಿತ

ಸಮಗ್ರ ನ್ಯೂಸ್ : ಕುಂದಾಪುರ ಶಂಕರನಾರಾಯಣದಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆಯು ವಿಶ್ವದರ್ಜೆಯ ಚಿಕಿತ್ಸಾ ಸೌಲಭ್ಯಗಳನ್ನು ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ಡಿ 08 ರಂದು ಉದ್ಘಾಟನೆಗೊಂಡಿತು. ನಾರಾಯಣ ನೇತ್ರಾಲಯ ಇದರ ನಿರ್ವಹಣೆ ಮಾಡಲಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಉನ್ನತ ಗುಣಮಟ್ಟದ ಆರೈಕೆಗಾಗಿ ತಜ್ಞ ವೈದ್ಯರ ಮತ್ತು ಆರೋಗ್ಯ ವೃತ್ತಿಪರರ ಸೇವೆಯನ್ನು ಒದಗಿಸಲು ಈ ಚಾರಿಟೇಬಲ್ ಆಸ್ಪತ್ರೆ ಸಜ್ಜಾಗಿದೆ.ಶಂಕರನಾರಾಯಣ ಕನ್‌ಸ್ಟ್ರಕ್ಷನ್ಸ್ ಪ್ರೈ. ಲಿ.ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಎನ್. ಸೀತಾರಾಮ್ ಶೆಟ್ಟಿ ಅವರು ತಮ್ಮ ಸಂಸ್ಥೆಯ ಸಿಎಸ್‌ಆರ್ ಯೋಜನೆಯಡಿ ಈ ಸ್ಥಾಪನೆ ಮಾಡಿದ್ದು, ಅವರ ಹಿರಿಯ ಸಹೋದರ, ನಾರಾಯಣ ನೇತ್ರಾಲಯ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಸಂಸ್ಥಾಪಕ ದಿವಂಗತ ಡಾ.ಭುಜಂಗ ಶೆಟ್ಟಿ ಅವರು ಈ ಯೋಜನೆಯ ಬೆನ್ನೆಲುಬಾಗಿದ್ದರು.

Ad Widget . Ad Widget . Ad Widget .

ಡಾ.ಎನ್ ಸೀತಾರಾಮ್ ಶೆಟ್ಟಿ ಅವರ ಪುತ್ರ ಭೂಮಿಪುತ್ರ ಆರ್ಕಿಟೆಕ್ಟರ್‌ನ ವ್ಯವಸ್ಥಾಪಕ ನಿರ್ದೇಶಕ ಅಲೋಕ್ ಶೆಟ್ಟಿ ಈ ಆಸ್ಪತ್ರೆಯನ್ನು ವಿಶ್ವದರ್ಜೆಯಲ್ಲಿ ವಿನ್ಯಾಸಗೊಳಿಸಿದ್ದಾರೆ.ಹಣ ಪಾವತಿಸುವ ಕೌಂಟರ್‌ಗಳಿಲ್ಲದ ಈ ಆಸ್ಪತ್ರೆಯಲ್ಲಿ ಸಂಪೂರ್ಣವಾಗಿ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ವಾರ್ಷಿಕವಾಗಿ ೭೦,೦೦೦ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಎರಡು ಅಲ್ವಾ ಆಪರೇಷನ್ ಥಿಯೇಟರ್‌ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ವಿದೇಶದಿಂದ ಆಮದು ಮಾಡಲಾದ ಫ್ಯಾಕೊ ಯಂತ್ರಗಳನ್ನು ಬಳಸಲಾಗುತ್ತದೆ

Leave a Comment

Your email address will not be published. Required fields are marked *