ಕಾಬೂಲ್ : ಅಶ್ರಫ್ ಘನಿ ಅವರ ಆಫ್ಘಾನಿಸ್ತಾನ ಸರ್ಕಾರ ಭಾನುವಾರ ತಾಲಿಬಾನ್ ಗೆ ಶರಣಾಗುತ್ತಿದ್ದಂತೆ, ಅಘಾನಿಸ್ತಾನದಿಂದ ಜನರು ಪರಾರಿಯಾಗುತ್ತಿದ್ದಾರೆ. ಆದರೆ ರತ್ತನ್ ನಾಥ್ ದೇವಾಲಯದ ಉಸ್ತುವಾರಿವಹಿಸಿರುವ ಹಿಂದೂ ಪೂಜಾರಿಯೊಬ್ಬರು ಕಾಬೂಲ್ ನಿಂದ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ.
ಕಾಬೂಲ್ ನ ರತ್ತನ್ ನಾಥ್ ದೇವಾಲಯದ ಪುರೋಹಿತ ಪಂಡಿತ್ ರಾಜೇಶ್ ಕುಮಾರ್ ಅವರು, ‘ಕೆಲವು ಹಿಂದೂಗಳು ನನ್ನನ್ನು ಕಾಬೂಲ್ ನಿಂದ ಹೊರಹೋಗುವಂತೆ ಒತ್ತಾಯಿಸಿದ್ದಾರೆ ಮತ್ತು ನನ್ನ ಪ್ರಯಾಣ ಮತ್ತು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಮುಂದೆ ಬಂದಿದ್ದಾರೆ’ ಎಂದು ಹೇಳಿದರು.
ಆದರೆ ನನ್ನ ಪೂರ್ವಜರು ನೂರಾರು ವರ್ಷಗಳ ಕಾಲ ಈ ಮಂದಿರಕ್ಕೆ ಸೇವೆ ಸಲ್ಲಿಸಿದರು. ನಾನು ಅದನ್ನು ಕೈಬಿಡುವುದಿಲ್ಲ. ತಾಲಿಬಾನ್ ನನ್ನನ್ನು ಕೊಂದರೆ, ನಾನು ಅದನ್ನು ನನ್ನ ಸೇವೆ ಎಂದು ಪರಿಗಣಿಸುತ್ತೇನೆ’, ಎಂದು ಅವರು ಹೇಳಿದರು.