ಸಮಗ್ರ ನ್ಯೂಸ್ : ಅಧಿವೇಶನದ ಪ್ರತಿಯಾಗಿ ಮಹಾಮೇಳಾವ್ ನಡೆಸಲು ಮುಂದಾಗಿದ್ದ ನಾಡದ್ರೋಹಿ ಎಂಇಎಸ್ ಪುಂಡರನ್ನು ಬೆಳಗಾವಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ರತಿವರ್ಷ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನಾಡದ್ರೋಹಿ ಎಂಇಎಸ್ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳಾವ್ ಆಯೋಜನೆ ಮಾಡುತ್ತದೆ. ಈ ಬಾರಿಯು ಎಂಇಎಸ್ ಮಹಾಮೇಳಾವ್ ಆಯೋಜನೆ ಮಾಡಿದೆ.ಹಾಗಾಗಿ ಜಿಲ್ಲಾಡಳಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧ ಹೇರಿತು. ಆದರೆ ಜಿಲ್ಲಾಡಳಿತ ನಿಷೇದ ಹೇರಿದರು ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗಿ ಮಹಾಮೇಳಾವ್ ಆಚರಣೆಗೆ ಮುಂದಾಗಿದೆ ಈ ವೇಳೆ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ನಗರದ ಸಂಭಾಜಿ ವೃತ್ತದ ಬಳಿ 20 ಕ್ಕೂ ಹೆಚ್ಚು ಎಂಇಎಸ್ ಪುಂಡರನ್ನು ಪುಂಡರು ಅರೆಸ್ಟ್ ಮಾಡಲಾಗಿದೆ. ಎಂಇಎಸ್ ನಾಯಕರಾದ ಮನೋಹರ ಕಿಣೇಕರ, ಆರ್ ಎಂ. ಪಾಟೀಲ್, ಪ್ರಕಾಶ ಶಿರೋಲಕರ್, ಪ್ರಕಾಶ ಮರ್ಕಾಳೆ ಸೇರಿ 20ಕ್ಕೂ ಅಧಿಕ ವಶಕ್ಕೆ ಪಡೆಯಲಾಗಿದೆ. ಎಂಇಎಸ್ ಮಹಾಮೇಳಾವ್ ಹಿತನ್ನೆಲೆ ಬೆಳಗಾವಿ ನಗರದಲ್ಲಿ ಬೀಗಿ ಖಾಕಿ ಸರ್ಪಗಾವಲು ಹಾಕಲಾಗಿತ್ತು. ನಗರದ ಮೂರು ಮೈದಾನ, ಒಂದು ವೃತ್ತದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಬೀಗಿ ಭದ್ರತೆ ಒದಗಿಸಲಾಗಿತ್ತು.