ಸಮಗ್ರ ನ್ಯೂಸ್: ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿಯನ್ನು ಒಡೆದು ಹಾಕಲು ಕನಸಿನಲ್ಲಿ ಯೇಸು ಹೇಳಿದ್ದ ಎಂದು ಕಿಡಿಗೇಡಿಯೊಬ್ಬ ಸ್ವಾಮೀಜಿಯವರ ಪುತ್ಥಳಿಯನ್ನು ಒಡೆದು ವಿರೂಪಗೊಳಿಸಿದ್ದ, ಇದೀಗ ಆರೋಪಿಯನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ರಾಜ್ ಶಿವು ಎಂದು ಗುರುತಿಸಲಾಗಿದ್ದು, ಕಳೆದ ಶನಿವಾರ ಗಿರಿನಗರದ ಬಳಿಯ ವೀರಭದ್ರನಗರ ಬಸ್ ನಿಲ್ದಾಣದ ಬಳಿ ಕಳೆದ ಶನಿವಾರ ರಾತ್ರಿ ಪುತ್ಥಳಿಗೆ ಹಾನಿ ಮಾಡಿದ್ದ.ಶಿವಕುಮಾರ್ ಸ್ವಾಮೀಜಿ ಮೂರ್ತಿ ಒಡೆಯಲು ಕನಸನಲ್ಲಿ ಬಂದು ಏಸು ಹೇಳಿದ್ದರಂತೆ. ಏಸು ಹೇಳಿದ್ದಕ್ಕೆ ಶಿವಕುಮಾರ್ ಸ್ವಾಮೀಜಿ ಮೂರ್ತಿ ವಿರೂಪಗೊಳಿಸಿದ್ದೇನೆ ಎಂದು ಆರೋಪಿ ತಪ್ರೊಪ್ಪಿಕೊಂಡಿದ್ದಾನೆ.
7 ವರ್ಷಗಳ ಹಿಂದೆ ರಾಜ್ ಶಿವು ಹಿಂದೂ ಧರ್ಮ ತೊರೆದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ. ಹಿಂದೂ ದೇವತೆಗಳು, ಹಿಂದೂ ಧರ್ಮದ ಸಂತರು, ಸನ್ಯಾಸಿಗಳ ಮೇಲೆ ದ್ವೇಷ ಸಾಧಿಸುತ್ತಿದ್ದ. ಶನಿವಾರ ರಾತ್ರಿ ಸುತ್ತಿಗೆ ಸಮೇತ ಆರೋಪಿ ಬಂದು, ರಾತ್ರಿ ಯಾರು ಇಲ್ಲದ ವೇಳೆ ಪುತ್ಥಳಿ ವಿರೂಪಗೊಳಿಸಿ ಎಸ್ಕೆಪ್ ಆಗಿದ್ದ. ಅಲ್ಲದೆ ಇದರ ಜೊತೆಗೆ ಕ್ರೈಸ್ತ ಧರ್ಮ ಪ್ರಚಾರವನ್ನು ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.