ಸಮಗ್ರ ನ್ಯೂಸ್:ಫೆಂಗಲ್ ಚಂಡಮಾರುತದ ಅಬ್ಬರ ತಮಿಳುನಾಡಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿದೆ. ಒಂದೆಡೆ ರಣಮಳೆ ಸುರಿಯುತ್ತಿದ್ದರೆ ಮತ್ತೊಂದೆಡೆ ಭೂಕುಸಿತ, ಪ್ರವಾಹಸ್ಥಿತಿ ಎದುರಾಗಿದೆ. ಚಂಡಮಾರುತದ ಹೊಡೆತಕ್ಕೆ ಈವರೆಗೆ ಹಲವರು ಸಾವನ್ನಪ್ಪಿದ್ದಾರೆ. ಸಾವಿರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಈ ನಡುವೆ ತಮುಳುನಾಡಿನ ಕೃಷ್ಣಗಿರಿಯಲ್ಲಿ ಭೀಕರ ಪ್ರವಾಹವುಂಟಾಗಿದ್ದು, ಪ್ರವಾಹದ ಅಬ್ಬರಕ್ಕೆ ರಸ್ತೆ ಬದಿನಿಲ್ಲಿದ್ದ ನಿಲ್ಲಿಸಿಂದ ಬಸ್ ಗಳು, ಟಿಟಿ ವಾಹನಗಳು, ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.ರಸ್ತೆ ತುಂಬೆಲ್ಲ ನೀರು ಬೋರ್ಗರೆದು ಪ್ರವಾಹದ ರೀತಿಯಲ್ಲಿ ಉಕ್ಕಿ ಹರಿಯುತ್ತಿದ್ದು, ನೀರಿನ ರಸಕ್ಕೆ ಟ್ಯಾಂಕರ್ ಗಳು, ವಾಹನಗಳು ಕೊಚ್ಚಿ ಹೋಗಿವೆ. ಹಲವೆಡೆ ಮನೆ, ಆಸ್ಪತ್ರೆಗಳು ಜಲಾವೃತಗೊಂಡಿವೆ. ವಿಲ್ಲುಪ್ಪುರಂ ನಲ್ಲಿ ಆಸ್ಪತ್ರೆಗೆ ನೀರು ನುಗ್ಗಿ ರೋಗಿಗಳು ಪರದಾಡುವ ಸ್ಥಿತಿ ನಿಮಾಣವಾಗಿದೆ.