ಸಮಗ್ರ ನ್ಯೂಸ್ : 93 ವರ್ಷದ ವೃದ್ಧ ಮಹಿಳಾ ಖೈದಿಯನ್ನು ಗುರುವಾರ ಪೆರೋಲ್ ಮೇಲೆ ಬಿಡುಗಡೆ ಮಾಡಿರುವುದನ್ನು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ನ.16ರಂದು ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಕಲಬುರಗಿ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 93 ವರ್ಷದ ವೃದ್ದೆ, ಮಹಿಳಾ ಸಜೆ ಕೈದಿಯೊಬ್ಬರು, ಸ್ವ ಕಾರ್ಯಗಳನ್ನು ಮಾಡಿಕೊಳ್ಳಲಾರದ ಸ್ಥಿತಿಯಲ್ಲಿ, ಅನಾರೋಗ್ಯದಿಂದ ಹಾಸಿಗೆಯಲ್ಲಿದ್ದ ಸ್ಥಿತಿಯನ್ನು ಕಂಡು ಮುರುಗಿದ್ದರು.ಕಾನೂನು ಸೇವಾ ಪ್ರಾಧಿಕಾರಕ್ಕೆ ಸದರಿ ಮಹಿಳೆಯನ್ನು ಬಿಡುಗಡೆಗೊಳಿಸಲು ಮೇಲ್ಮನವಿ ಸಲ್ಲಿಸಲು ಸಲಹೆ ನೀಡಿದ್ದರು.
ಅವರ ಸಲಹೆಯಂತೆ ಕಾನೂನು ಸೇವಾ ಪ್ರಾಧಿಕಾರದಿಂದ, ಕಾರಾಗೃಹದಲ್ಲಿ ಅನಾರೋಗ್ಯ ಸ್ಥಿತಿಯಲ್ಲಿರುವ ವೃದ್ಧೆ ಖೈದಿಯನ್ನು ಬಿಡುಗಡೆಗೊಳಿಸಲು ಉಚ್ಚ ನ್ಯಾಯಲಯದಲ್ಲಿ ರಿವಿವ್ಯೂ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅದರ ಮೇರೆಗೆ ನ್ಯಾಯಾಲಯದ ಪ್ರಕ್ರಿಯೆಗೆ ಕಾಲಾವಕಾಶ ಬೇಕಾಗಿದ್ದರಿಂದ ಹಾಲಿಕಾರಗೃಹ ಅಧಿಕಾರಿಗಳು ವೃದ್ದೆ ಖೈದಿಯನ್ನು ತಾತ್ಕಲಿಕವಾಗಿ ಪೆರೋಲ್ ಮೇಲೆ ಗುರುವಾರ ಬಿಡುಗಡೆ ಮಾಡಿದ್ದರು. ಈ ಸುದ್ದಿ ತಿಳಿದ ಉಪ ಲೋಕಾಯುಕ್ತರು ಖುಷಿ ವ್ಯಕ್ತಪಡಿಸಿದ್ದಾರೆ.