Ad Widget .

ಹುತಾತ್ಮ ಜವಾನನ ಪುತ್ರಿ ಮದುವೆಯಲ್ಲಿ ಕನ್ಯಾದಾನ ಮಾಡಿದ CRPF ಯೋಧರು, ಭಾವುಕ ಕ್ಷಣ!

ಸಮಗ್ರ ನ್ಯೂಸ್: ಹರ್ಯಾಣ(ನ.26) ಹುತಾತ್ಮ CRPF CR ಯೋಧ ಸತೀಶ್ ಕುಮಾರ್ ಪುತ್ರಿಯ ವಿವಾದ ಅದ್ದೂರಿಯಾಗಿ ನಡೆದಿದೆ. ಈ ಮದುವೆಯ ವಿಶೇಷ ಏನಂದರೆ ಸಂಪೂರ್ಣ ಮದುವೆ ಜವಾಬ್ದಾರಿಯನ್ನು CRPF ಯೋಧರೆ ನಿರ್ವಹಿಸಿದ್ದಾರೆ. ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನವನ್ನು ಮಾಡಿದ ವಿಶೇಷ ಭಾವುಕ ಕ್ಷಣದ ಮದುವೆ ಹರ್ಯಾಣದ ಚತ್ತಾರ್ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಸತೀಶ್ ಕುಟುಂಬಸ್ಥರು, ಆಪ್ತರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಇದೇ ವೇಳೆ ಯೋಧರ ಪರ ಜೈಕಾರ ಮೊಳಗಿದೆ.ಚತ್ತಾರ್ ಗ್ರಾಮದ CRPF ಯೋಧ ಸತೀಶ್ ಕುಮಾರ್ 9 ವರ್ಷಗಳ ಹಿಂದೆ, ಅಂದರೆ ಮಾರ್ಚ್ 20, 2015ರಂದು ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರು. ಜಮ್ಮು ಮತ್ತು ಕಾಶ್ಮೀರದ ಕತುವಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸತೀಶ್ ಕುಮಾರ್ ಹುತಾತ್ಮರಾಗಿದ್ದರು. ಬಡ ಕುಟುಂಬದ ಸತೀಶ್ ಕುಮಾರ್ ದಿಟ್ಟ CRPF ಜವಾನ ಎಂದೇ ಗುರುತಿಸಿಕೊಂಡಿದ್ದರು. ಉಗ್ರರ ವಿರುದ್ಧದ ಮಿಂಚಿನ ಕಾರ್ಯಾಚರಣೆ ನಡೆಸುವಲ್ಲಿ ಸತೀಶ್‌ ಕುಮಾರ್ ಸದಾ ಮುಂದಿದ್ದರು.

Ad Widget . Ad Widget .

ಸತೀಶ್ ಕುಮಾರ್ ನಿಧನ ಕುಟುಂಬಕ್ಕೆ ಅತೀ ದೊಡ್ಡ ಆಘಾತ ನೀಡಿತ್ತು. ಅಂದು CRPF ಜವಾನರರು ಅಂತ್ಯಸಂಸ್ಕಾರದಲ್ಲಿ ಸತೀಶ್ ಕುಮಾರ್ ಪುತ್ರಿ ಹಾಗೂ ಕುಟುಂಬಕ್ಕೆ ಅಭಯ ನೀಡಿದ್ದರು. ಮುಂದಿನ ದಿನಗಳಲ್ಲೂ CRPF ಸದಾ ನಿಮ್ಮೊಂದಿಗಿದೆ ಎಂದಿತ್ತು.ಮಾವೋವಾದಿಗಳ ಹಾವಳಿಯಿಂದ ರಾಮನಿಗೆ ಮುಕ್ತಿ ನೀಡಿದ ಸಿಆರ್‌ಪಿಎಫ್ ಯೋಧರು: 21 ವರ್ಷಗಳ ಬಳಿಕ ಮತ್ತೆ ಪೂಜೆ ಸತೀಶ್ ಕುಮಾರ್ ಹುತಾತ್ಮರಾದ 9 ವರ್ಷದ ಬಳಿಕ ಪುತ್ರಿ ನಿಶಾ ಮದುವೆ ಫಿಕ್ಸ್ ಆಗಿದೆ. ಇತ್ತ CRPF ಜವಾನರು ಕಾರ್ಯಪ್ರವೃತ್ತರಾಗಿದ್ದಾರೆ.

ನಿಶಾ ತಂದೆ ಸತೀಶ್ ಕುಮಾರ್ ಹುತಾತ್ಮರಾಗಿರುವ ಕಾರಣ ತಂದೆಯ ಕೊರತೆ ಕಾಡಬಾರದು ಅನ್ನೋದು CRPF ಜವಾನರ ಆಶಯವಾಗಿತ್ತು. ನಿಶಾ ಮದುವೆಗೆ ಆಗಮಿಸಿದ CRPF ಜವಾನರು ಎಲ್ಲಾ ಜವಾಬ್ದಾರಿ ನಿರ್ವಹಿಸಿದ್ದಾರೆ. ತಂದೆಯ ಸ್ಥಾನದಲ್ಲಿ ನಿಂತು ನಿಶಾ ಮದುವೆ ಮಾಡಿಸಿದ್ದಾರೆ. ವರ ಹಾಗೂ ವರನ ಕುಟುಂಬಸ್ಥರನ್ನು ಸಿಆರ್‌ಪಿಎಫ್‌ ಯೋಧರು ಸ್ವಾಗತಿಸಿದ್ದಾರೆ. ಬಳಿಕ ಮದುವೆ ಸಂಪ್ರದಾಯ ಹಾಗೂ ಪದ್ಧತಿಯನ್ನು ನೆರವೇರಿಸಿದ್ದಾರೆ. ಕನ್ಯಾದಾನ ಮಾಡಿ ಅದ್ದೂರಿಯಾಗಿ ಮದುವೆ ಮಹೋತ್ಸವ ಮಾಡಿದ್ದಾರೆ.

Leave a Comment

Your email address will not be published. Required fields are marked *