ಸಮಗ್ರನ್ಯೂಸ್: ಕೆಲವು ದಿನಗಳ ಹಿಂದೆ ಮಲೆಮಹದೇಶ್ವರ ಬೆಟ್ಟದಲ್ಲಿ ತಾಯಿಯಿಂದ ಮಗು ಅಪಹರಿಸಿ ಪರಾರಿಯಾಗಿದ್ದ ಭಿಕ್ಷುಕಿ ಸಿಕ್ಕಿಬಿದ್ದಿದ್ದಾಳೆ. ಚಾಮರಾಜನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ್ದ ಪ್ರಕರಣದಲ್ಲಿ ಆರೋಪಿ ಮಂಡ್ಯದ ಹೊಸಹಳ್ಳಿ ಕಾಲೊನಿಯ ರಾಧಾಳನ್ನು(28) ಪೊಲೀಸರು ಬಂಧಿಸಿದ್ದ ಘಟನೆ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಮನಗರ ಮೂಲದ ಅನಿತಾಳನ್ನು ಪರಿಚಯ ಮಾಡಿಕೊಂಡು ಅನಿತಾಳ ಮಗುವನ್ನು ಪಡೆದು ಭಿಕ್ಷೆ ಬೇಡಿ ವಾಪಸ್ ಬರುವುದಾಗಿ ನಂಬಿಸಿ ಪರಾರಿಯಾಗಿದ್ದಳು.ಈ ಕುರಿತು ಅನಿತಾ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಗು ಅಪಹರಿಸಿದವಳ ಜಾಡು ಹಿಡಿದು ಕೊರಟ ಪೊಲೀಸರು ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿ ಇದನ್ನಾಧರಿಸಿ ನವೆಂಬರ್ 19 ರಂದು ಮೈಸೂರು ರೈಲ್ವೆ ಪೊಲೀಸರ ನೆರವಿನೊಂದಿಗೆ ಮಗುವನ್ನು ಅಪರಿಸಿದ್ದ ರಾಧಾಳನ್ನು ಮೈಸೂರಿನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಧಾಳನ್ನು ವಿಚಾರಣೆಗೊಳಪಡಿಸಿದಾಗ ಮಗುವನ್ನು ಅಪಹರಿಸಿಕೊಂಡು ಹೋಗಿ ಕಳೆದ 4 ದಿನಗಳಿಂದ ರೈಲಿನಲ್ಲಿ ಭಿಕ್ಷಾಟನೆ ಮಾಡಿದ್ದಾಗಿ ತಿಳಿಸಿದ್ದಾಳೆ.ಆರೋಪಿ ರಾಧಾಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಇಲಾಖೆಯ ಮುಂದೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.