ಸಮಗ್ರ ನ್ಯೂಸ್: ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಮತ್ತೆ ಏರಿಕೆ ಕಡೆ ಮುಖ ಮಾಡಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರುಮುಖದತ್ತ ಸಾಗುತ್ತಿದ್ದು ಡಬ್ಬಲ್ ಚೋಲ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಒಂದು ವಾರದ ಧಾರಣೆ ಗಮನಿಸಿದರೆ ಹೊಸ ಅಡಿಕೆ, ಸಿಂಗಲ್ ಚೋಲ್ ಧಾರಣೆಯಲ್ಲಿಯೂ ಹೆಚ್ಚಳ ದಾಖಲಾಗಿದೆ.
ನ. 19 ರಂದು ಹೊರ ಮಾರುಕಟ್ಟೆಯಲ್ಲಿ ಡಬ್ಬಲ್ ಚೋಲ್ ಧಾರಣೆ 510ರಿಂದ 512 ರೂ. ತನಕವೂ ಇತ್ತು. ಕೆಲವೆಡೆ 505ರಿಂದ 510 ರೂ. ಇತ್ತು. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 500 ರೂ. ಇತ್ತು. ನ. 15 ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 330 ರೂ., ಸಿಂಗಲ್ ಚೋಲ್ ಧಾರಣೆ 420 ರೂ. ತನಕ ಇತ್ತು.
ಕಳೆದ ಮೂರು ದಿನಗಳಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ., ಸಿಂಗಲ್ ಚೋಲ್ ಧಾರಣೆ 10 ರೂ.ನಷ್ಟು ಏರಿಕೆ ಕಂಡಿದೆ. ಅಂದರೆ ಹೊಸ ಅಡಿಕೆ ಕೆ.ಜಿ.ಗೆ 335 ರೂ., ಸಿಂಗಲ್ ಚೋಲ್ ಧಾರಣೆ ಕೆ.ಜಿ.ಗೆ 430 ರೂ.ದಾಖಲಾಗಿತ್ತು. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ 350 -355 ರೂ., ಸಿಂಗಲ್ ಚೋಲ್ ಧಾರಣೆ 435-438 ರೂ. ತನಕ ಇತ್ತು.
ತೆಂಗು ಧಾರಣೆಯಲ್ಲೂ ಏರಿಕೆ:
ಕೇರಳ ಹೊರತುಪಡಿಸಿ ದೇಶದಲ್ಲೇ ಅತೀ ಹೆಚ್ಚು ತೆಂಗಿನಕಾಯಿ ಬೆಳೆಯುವ ಕರ್ನಾಟಕ ದಲ್ಲೂ ಈ ಬಾರಿ ಇಳುವರಿ ಕೊರತೆಯಿದ್ದು, ದಿನೇದಿನೆ ಬೆಲೆ ಏರಿಕೆಯಾಗುತ್ತಿದೆ. ಇದೇ ಮೊದಲ ಬಾರಿಗೆ ತೆಂಗಿನಕಾಯಿ ಬೆಲೆ 60 ರೂ. ಗಡಿ ದಾಟಿದೆ. ಇದು ತೆಂಗಿನ ಕಾಯಿ ಮಾರುಕಟ್ಟೆಯ ಸಾರ್ವ ಕಾಲಿಕ ಗರಿಷ್ಠ ಧಾರಣೆ ಯಾಗಿದೆ.
ರೈತರಿಂದಲೇ ಉತ್ತಮ ಗುಣ ಮಟ್ಟದ ಕಾಯಿಗಳನ್ನು 50-52 ರೂ. ದರದಲ್ಲಿ ವ್ಯಾಪಾರಿಗಳು ಖರೀದಿಸುತ್ತಿದ್ದು, ಅಂಗಡಿಗಳಲ್ಲಿ 58-60 ರೂ.ಗೆ ಮಾರುತ್ತಿದ್ದಾರೆ. ಮಂಗಳೂರು ಕೊಬ್ಬರಿ ಕೆ.ಜಿ.ಗೆ 130-140 ರೂ., ತಿಪಟೂರು ಕೊಬ್ಬರಿಗೆ 150 ರೂ. ಧಾರಣೆ ಇದೆ.
ಉಳಿದಂತೆ ಕಾಳುಮೆಣಸು ಕೆ.ಜಿಗೆ 615-620 ಧಾರಣೆ ಇದ್ದರೆ, ಕೋಕ್ಕೋ 110-120 ದರ ದಾಖಲಾಗಿದೆ.