ಸಮಗ್ರ ನ್ಯೂಸ್: ಮಂಗಳೂರಿನ ಉಚ್ಚಿಲ ಬಳಿ ಇರುವ ಸಾಯಿರಾಂ ವಾಝೂ ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮೈಸೂರಿನ ಮೂವರು ಯುವತಿಯರು ಪ್ರಾಣ ಬಿಟ್ಟ ಘಟನೆ 17 ರಂದು ನಡೆದಿದೆ.ಮೃತ ನಿಶ್ಚಿತ, ಪಾರ್ವತಿ ಹಾಗೂ ಕೀರ್ತನಾ ಎಂದು ಗುರುತಿಸಲಾಗಿದೆ.
ಈಜುಕೊಳದಲ್ಲಿ ಸಾಹಯಕ್ಕಾಗಿ ಹಾಗೂ ವಿಶ್ರಾಂತಿಗಾಗಿ ಗಾಳಿ ತುಂಬಿದ ಟ್ಯೂಬ್‌ಗಳನ್ನು ಹಾಕಲಾಗಿತ್ತು. ಆದರೆ ಟ್ಯೂಬ್‌ಗಳು ಆಳ ನೀರಿನ ಮೇಲ್ಬಾಗದಲ್ಲಿತ್ತು. ಟ್ಯೂಬ್ ಹಿಡಿದು ವಾಪಸ್ ತರಲು ಸಾಧ್ಯವಾಗಿಲ್ಲ. ಹೀಗಾಗಿ ಟ್ಯೂಬನ್ನು ಅಲ್ಲೆ ಬಿಟ್ಟಿದ್ದಾಳೆ. ಇದೇ ವೇಳೆ ಟ್ಯೂಬ್ ತರಲು ಹೋದ ಯುವತಿಯ ಹಿಂಭಾಗದಲ್ಲಿದ್ದ ಓರ್ವ ಯುವತಿ ನೀರಿನಲ್ಲೇ ಆಯ ತಪ್ಪಿದ್ದಾಳೆ.
ಕೈಕಾಲು ಬಡಿದುಕೊಳ್ಳಲು ಆರಂಭಿಸಿದ್ದಾಳೆ. ಇದೇ ವೇಳೆ ಪಕ್ಕದಲ್ಲಿದ್ದ ಯುವತಿ ನೆರವಿಗೆ ಧಾವಿಸಿದ್ದಾಳೆ. ಕೈಚಾಚಿ ಯುವತಿಯನ್ನು ರಕ್ಷಿಸಲು ಮುಂದಾಗಿದ್ದಾಳೆ. ಆದರೆ ಮುಳುಗುತ್ತಿದ್ದ ಯುವತಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ ನೆರವಿಗೆ ಕೈಚಾಚಿದ ಯುವತಿ ಕೂಡ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾಳೆ. ಈ ವೇಳೆ ಮತ್ತಷ್ಟು ಗಾಬರಿಗೊಂಡ ಮೂರನೇ ಯುವತಿ ಇಬ್ಬರನ್ನು ರಕ್ಷಿಸಲು ಕೈ ನೀಡಿದ್ದಾಳೆ. ಪರಿಣಾಮ ಮೂವರು ನೀರಿನಲ್ಲಿ ಮುಳುಗಿದ್ದಾರೆ.
ಯುವತಿಯರ ಮನೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತನಿಖೆ ನಡೆಸುತ್ತಿರುವ ಪೊಲೀಸರು ರೆಸಾರ್ಟ್ ಮಾಲೀಕನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರೆಸಾರ್ಟ್ ಸುರಕ್ಷತಾ ನಿಯಮ ಪಾಲಿಸಿಲ್ಲ ಅನ್ನೋ ಆರೋಪಗಳು ಕೇಳಿಬರುತ್ತಿದೆ. ಬೀಚ್ ರೆಸಾರ್ಟ್ ನಿಯಮ ಉಲ್ಲಂಘಿಸಿರುವ ಕಾರಣ ಪರವಾನಗೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.ತನಿಖೆ ಮುಗಿಯುವ ವರೆಗೂ ರೆಸಾರ್ಟ್‌ಗೆ ಪೊಲೀಸರು ಬೀಗ ಹಾಕಿದ್ದಾರೆ. ರೆಸಾರ್ಟ್ ಸೀಲ್ ಡೌನ್ ಮಾಡಿರುವ ಪೊಲೀಸರು ಚುರುಕುಗಳಿಸಿದ್ದಾರೆ.