Ad Widget .

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ₹ 605 ಕೋಟಿ ಲಾಭಾಂಶ ವಿತರಣೆ

ಸಮಗ್ರ ನ್ಯೂಸ್: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ (ಎಸ್ಕೆಡಿಆರ್ಡಿಪಿ) ಸ್ವಸಹಾಯ ಸಂಘಗಳ ಸದಸ್ಯರಿಗೆ ಒಟ್ಟು ₹ 605 ಕೋಟಿ ಲಾಭಾಂಶ ವಿತರಿಸಲಾಯಿತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಧರ್ಮಸ್ಥಳದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ‌ ಹಣಕಾಸು ಸಚಿವೆ ನಿರ್ಮಲಾ‌ ಸೀತಾರಾಮನ್ ಅವರು, ಬೆಳ್ತಂಗಡಿಯ ಧನ್ಯಶ್ರೀ ಸಂಘ, ಕುಂದಾಪುರದ ಶ್ರೀನಿಧಿ ಸಂಘ, ಹೊಸಪೇಟೆಯ ಶ್ರೀಶಂಕರ ಸಂಘ, ಆನೇಕಲ್ ನ ಅಪೂರ್ವ ಸಂಘ, ಖಾನಾಪುರದ ಅಹದ್ ಸಂಘ, ಹಾಸನದ ರೋಶನ್ ಸಂಘಗಳ ಸದಸ್ಯರಿಗೆ ಲಾಭಾಂಶದ ಚೆಕ್ ವಿತರಿಸಿದರು.

Ad Widget . Ad Widget . Ad Widget .

ಬಳಿಕ ಮಾತನಾಡಿದ ಅವರು, ‘ಹಿಂದೆ ಗ್ರಾಮೀಣಾಭಿವೃದ್ಧಿ ಎಂಬುದು ಕಲ್ಯಾಣ ಕಾರ್ಯಕ್ರಮಕ್ಕೆ ಸೀಮಿತ ಆಗಿತ್ತು. ಸರ್ಕಾರ ಸ್ವಸಹಾಯ ಗುಂಪುಗಳಿಗೆ ಹಣಕಾಸಿನ ನೆರವು ನೀಡುತ್ತಿತ್ತು. ಅವರು ಅದನ್ನು ಸಣ್ಣ ಪುಟ್ಟ ಉದ್ದೇಶಗಳಿಗೆ ಬಳಸುತ್ತಿದ್ದರು. ಆದರೆ‌, ಈಗ ಗ್ರಾಮೀಣಾಭಿವೃದ್ಧಿಯ ಪರಿಕಲ್ಪನೆ‌ ಬದಲಾಗಿದೆ.‌ ಈಗ ಕಲ್ಯಾಣ ಕಾರ್ಯಕ್ರಮದ ಮೂಲಕ ಮಹಿಳೆಯರೂ ಸ್ವಾವಲಂಬಿಗಳಾಗುತ್ತಿದ್ದಾರೆ. ಅಷ್ಟೇ‌ ಅಲ್ಲ, ‘ನನ್ನ ಲಾಭಾಂಶವನ್ನು ನಾನೇ ಗಳಿಸುತ್ತಿದ್ದೇನೆ” ಎಂಬ ಅತ್ಮಗೌರವವನ್ನೂ ಅವರು ಪಡೆಯುತ್ತಿದ್ದಾರೆ. ಇದರಲ್ಲಿ ಕೇಂದ್ರ‌ ಸರ್ಕಾರ‌ ಹಾಗೂ ಸ್ವಸಹಾಯ ಸಂಘಗಳೆರಡರ ಪಾತ್ರವೂ ಇದೆ. ಕಲ್ಯಾಣ ಎಂಬುದು ಯಾವುದೇ ಉದಾರ ಕೊಡುಗೆಯ ಕುರುಹಾಗಿ ಉಳಿದಿಲ್ಲ’ ಎಂದರು. ‘ಮಹಿಳೆಯರಲ್ಲಿಯೂ ಸಾಮರ್ಥ್ಯವಿದೆ. ಅವರೂ ಉತ್ಪನ್ನ ತಯಾರಿಸಬಲ್ಲರು. ಮೌಲ್ಯವರ್ಧನೆ ಮಾಡಿ ಲಾಭ ಗಳಿಸಬಲ್ಲರು, ಅವರೂ ಮಾರುಕಟ್ಟೆ ಸೃಷ್ಡಿಸಬಲ್ಲರು. ಅವರು ತಯಾರಿಸಿದ ಉತ್ಪನ್ನಗಳನ್ನು ಗ್ರಾಹಕರು ಖರೀದಿಸುತ್ತಾರೆ. ಅದರಿಂದ ಬರುವ ಲಾಭಾಂಶವನ್ನು ಅವರು ಘನತೆಯಿಂದ ಪಡೆದುಕೊಳ್ಳುತ್ತಿದ್ದಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ‘ಪ್ರಧಾನಿ ನರೇಂದ್ರ ಮೋದಿ ಸ್ತ್ರೀ ಶಕ್ತಿಯನ್ನು ಜಾಗೃತಗೊಳಿಸಿದ್ದಾರೆ. ಎಲ್ಲ ಮನೆ ಮನೆಯಲ್ಲಿ ಮಹಿಳೆಯರೇ ನಾಯಕತ್ವ ವಹಿಸಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲೂ 55 ಲಕ್ಷ ಸದಸ್ಯರಲ್ಲಿ 34 ಲಕ್ಷ ಸದಸ್ಯರು ಮಹಿಳೆಯರು. ಅವರ ಪಾಲು ಶೇ 63ರಷ್ಟಿದೆ. ಎಲ್ಲ ಹೆಣ್ಣು ಮಕ್ಕಳೂ ಮನೆಯ ಆರ್ಥಿಕ ಸಚಿವರಾಗಿದ್ದಾರೆ. ನಿಜವಾದ ಅರ್ಥದಲ್ಲೇ ಗೃಹಲಕ್ಷ್ಮೀ ಆಗಿದ್ದಾರೆ’ ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ.ಹೆಗ್ಗಡೆ ಭಾಗವಹಿಸಿದ್ದರು.

ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಸ್ವಾಗತಿಸಿದರು. ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ ಧನ್ಯವಾದ ಸಮರ್ಪಿಸಿದರು.

Leave a Comment

Your email address will not be published. Required fields are marked *