Ad Widget .

ಮಂಗಳೂರಲ್ಲಿ ಸೈಟ್ ತೋರಿಸುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ

ಸಮಗ್ರ ನ್ಯೂಸ್: ರಿಯಲ್ ಎಸ್ಟೆಟ್ ಉದ್ಯಮಿಯೋರ್ವರು ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಆರೋಪಿ ವಿರುದ್ಧ ಸಂತ್ರಸ್ಥೆ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.

Ad Widget . Ad Widget .

ಬಿಲ್ಡರ್ ನನ್ನು ರಶೀದ್ ಎಂದು ಹೇಳಲಾಗುತ್ತಿದ್ದೆ.ಮಹಿಳೆ ನೀಡಿದ ದೂರಿನಲ್ಲಿ ಕುಶಾಲನಗರದಲ್ಲಿ ಒಳ್ಳೆಯ ಸೈಟ್ ಇದ್ದು ಅದನ್ನು ಖರೀದಿ ಮಾಡಬಹುದು ಎಂದು ರಶೀದ್‌ ಹೇಳಿದಾಗ ಅದಕ್ಕೆ ಒಪ್ಪಿದ್ದೆ. ಅ.21ರಂದು ರಶೀದ್‌ ಕಾರಿನಲ್ಲಿ ಕುಶಾಲನಗರಕ್ಕೆ ಕರೆದೊಯ್ದಿದ್ದರು. ಅಲ್ಲಿನ ಹೊಟೇಲ್‌ನಲ್ಲಿ ಇಬ್ಬರಿಗೆ ಪ್ರತ್ಯೇಕ ರೂಮ್ ಬುಕ್ ಮಾಡಿದ್ದೆ.

Ad Widget . Ad Widget .

ಆಗ ರಶೀದ್ ಒಂದೇ ರೂಮ್‌ನಲ್ಲಿ ಇರುವ ಇಂಗಿತ ವ್ಯಕ್ತಪಡಿಸಿದ್ದರು. ಅದಕ್ಕೆ ಹೆದರಿ ತಂಗಿಯ ಮನೆಯಲ್ಲಿ ಉಳಿದುಕೊಂಡಿದ್ದೆ.ಮರುದಿನ ರಶೀದ್ ಕರೆ ಮಾಡಿ 12 ಗಂಟೆಗೆ ಸೈಟ್ ನೋಡಲು ಬಾ ಎಂದಿದ್ದಾನೆ. ನಿನ್ನೆ ಒಂದೇ ರೂಂ ನಲ್ಲಿ ಇರಬಹುದು ಇತ್ತು ನಾನು ಏನೋ ನಿರೀಕ್ಷೆ ಮಾಡಿದ್ದೆ ಎಂದಾಗ ಯುವತಿ ನೀವು ಹೀಗೆ ಮಾತಾನಾಡುವುದು ಸರೀ ಅಲ್ಲ ನೀವು ವಯಸ್ಸಿನಲ್ಲಿ ನನ್ನ ತಂದೆ ಸಮಾನ ಎಂದಾಗ ತಪ್ಪಾಯಿತು ಸಾರಿ ಎಂದಿದ್ದನು.

ಬಳಿಕ ಕಾರಿನಲ್ಲಿ ಮಂಗಳೂರಿಗೆ ವಾಪಸಾಗುತ್ತಿದ್ದಾಗ ದಾರಿ ಮಧ್ಯೆ ಹಣದ ಆಮಿಷ ತೋರಿಸಿ ಮಾನಭಂಗ ಮಾಡಿದ್ದಾರೆ.ಈ ವಿಚಾರವನ್ನು ನನ್ನ ಮ್ಯಾನೇಜರ್‌ಗೆ ತಿಳಿಸಿದಾಗ ರಶೀದ್ ಅವಾಚ್ಯ ಶಬ್ದಗಳಿಂದ ಬೈದು ಕೆನ್ನೆಗೆ ಹೊಡೆದು ಜೀವಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ.

Leave a Comment

Your email address will not be published. Required fields are marked *