Ad Widget .

ಒಣದ್ರಾಕ್ಷಿಯ ಆರೋಗ್ಯ ಪ್ರಯೋಜನಗಳು

ಸಮಗ್ರ ನ್ಯೂಸ್:ಒಣದ್ರಾಕ್ಷಿಯನ್ನು ಪ್ರತಿದಿನ ಮಲಗುವ ಮುನ್ನ ನಾಲ್ಕರಿಂದ ಐದು ಒಣದ್ರಾಕ್ಷಿಯನ್ನು ರಾತ್ರಿ ಅರ್ಧ ಕಪ್ ನೀರಿನಲ್ಲಿ ನೆನಸಿಟ್ಟು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಒಣದ್ರಾಕ್ಷಿಯಲ್ಲಿ ಕಬ್ಬಿನಾಂಶ, ಪೊಟಾಶಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ನಾರಿನಾಂಶ ಆಗಾಧ ಪ್ರಮಾಣದಲ್ಲಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Ad Widget . Ad Widget .

ನಿಮ್ಮ ದೇಹದ ಎಕ್ಸ್‌ಟ್ರಾ ಬೊಜ್ಜನ್ನು ಇಳಿಸಲು ನೀವು ನೆನೆಸಿರುವ ಒಣ ದ್ರಾಕ್ಷಿ ಸೇವಿಸಬೇಕು.ನೈಸರ್ಗಿಕ ಸಕ್ಕರೆ ಅಂಶವನ್ನು ಒಳಗೊಂಡಿರುವ ಒಣದ್ರಾಕ್ಷಿಯು ನಿಮ್ಮಲ್ಲಿ ಚುರುಕುತನ ಮತ್ತು ಶಕ್ತಿ ತುಂಬಿರುವಂತೆ ಮಾಡುವುದು. ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ಕಬ್ಬಿನಾಂಶ, ಪೊಟಾಶಿಯಂ ಮತ್ತು ಕ್ಯಾಲ್ಸಿಯಂ ಇದ್ದು, ನಿಮ್ಮನ್ನು ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿಡುತ್ತದೆ.

Ad Widget . Ad Widget .

ರಕ್ತದೊತ್ತಡ ಕಡಿಮೆ ಮಾಡಿಕೊಳ್ಳಬೇಕು ಎಂದು ನಿಮಗನಿಸುತ್ತಿದ್ದರೆ ನೀವು ನೆನೆಸಿರುವಂತಹ ಒಣದ್ರಾಕ್ಷಿ ಸೇವಿಸಿ. ಅಧಿಕ ಉಪ್ಪು ಸೇವಿಸಿರುವ ಪರಿಣಾಮವಾಗಿ ರಕ್ತದೊತ್ತಡವು ಹೆಚ್ಚಾಗುವುದು. ಇಂತಹ ವೇಳೆ ಒಣ ದ್ರಾಕ್ಷಿ ಪರಿಣಾಮಕಾರಿ. ಒಣ ದ್ರಾಕ್ಷಿಯಲ್ಲಿ ಪೊಟಾಶಿಯಂ ಅಂಶವಿದೆ. ಇದು ದೇಹದಲ್ಲಿ ಉಪ್ಪಿನ ಅಂಶವನ್ನು ಸಮತೋಲನದಲ್ಲಿ ಇಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು.

ಮೂಳೆಗಳ ನಿರ್ಮಾಣಕ್ಕೆ ಬೇಕಾಗಿರುವಂತಹ ಬೋರಾನ್ ಎನ್ನುವ ಅಂಶವು ಒಣ ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಮೂಳೆಗಳಿಗೆ ಬಲ ನೀಡಲು ಬೇಕಾಗಿರುವ ಕ್ಯಾಲ್ಸಿಯಂ ಕೂಡ ಒಣದ್ರಾಕ್ಷಿಯಲ್ಲಿದೆ. ನೆನೆಸಿದ ಒಣದ್ರಾಕ್ಷಿ ತಿಂದರೆ ಈ ಪೋಷಕಾಂಶಗಳನ್ನು ದೇಹವು ಬೇಗನೆ ಹೀರಿಕೊಳ್ಳುವುದು ಮತ್ತು ಮೂಳೆಗಳ ಖನಿಜಾಂಶ ಸಾಂದ್ರತೆಯನ್ನು ಸುಧಾರಿಸುವುದು.

Leave a Comment

Your email address will not be published. Required fields are marked *