ಸಮಗ್ರ ನ್ಯೂಸ್: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟ ಮಾಡಲು ನಿಗದಿಗೊಳಿಸಿದ ಕೆಲವು ಸ್ಥಳಗಳು ಚರ್ಚೆಗೆ ಕಾರಣವಾಗಿವೆ.ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ, ಟೆಂಡರ್ ಪ್ರಕ್ರಿಯೆಗೆ ಬುಧವಾರ ಮಂಗಳೂರಿನ ನೆಹರೂ ಮೈದಾನಕ್ಕೆ ಪಾಲಿಕೆ ಅಧಿಕಾರಿಗಳು ಆಗಮಿಸಿದ್ದು, ಈ ವೇಳೆ ಕ್ರಿಕೆಟ್ ಅಸೋಸಿಯೇಶನ್‌ನಿಂದ ವಿರೋಧ ವ್ಯಕ್ತವಾಗಿದೆ.
ಗೀತಾಂಜಲಿ ಅವರು ಮಾಧ್ಯಮದ ಜತೆ ಮಾತನಾಡಿ, “ಮೈದಾನದಲ್ಲಿ ಪಟಾಕಿ ಅಂಗಡಿ ತೆರೆಯಲು ಟೆಂಡರ್ ಇದ್ದು ಗೇಟ್ ತೆರೆಯುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ನೆಹರೂ ಮೈದಾನವನ್ನು ಆಟೋಟ ಸ್ಪರ್ಧೆಗೆ ಮಾತ್ರ ಉಪಯೋಗಿಸಬೇಕು ಎಂದು ನ್ಯಾಯಾಲಯವೂ ಹೇಳಿದೆ. ಈ ವಿಷಯವನ್ನೂ ಅವರ ಗಮನಕ್ಕೆ ತಂದಿದ್ದೇವೆ’ ಎಂದು ತಿಳಿಸಿದ್ದಾರೆ.