ಆ. 16 ರಿಂದ ಕಾರವಾರದವರೆಗೂ ವಿಸ್ಟಾಡೋಮ್ ರೈಲು ವಿಸ್ತರಣೆ

Ad Widget ... ..

ಉಡುಪಿ: ಬೆಂಗಳೂರಿನಿAದ ಕಾರವಾರಕ್ಕೆ ಬೆಳಗಿನ ರೈಲು, ಆ. 16 ರಿಂದ ಹೊಸ ವಿಸ್ಟಾಡೋಮ್ ಕೋಚಿನೊಂದಿಗೆ ಪುನರಾರಂಭಗೊಳ್ಳಲಿದೆ ಎಂದು ನೈರುತ್ಯ ರೈಲ್ವೇ ತಿಳಿಸಿದೆ.

Ad Widget

ಇದಕ್ಕೆ ಕೊಂಕಣ್ ರೈಲ್ವೇ ಒಪ್ಪಿಗೆ ಸೂಚಿಸಿದ್ದು ರೈಲ್ವೇ ಹಿತರಕ್ಷಣಾ ಸಮಿತಿ ಪ್ರಯಾಣಿಕರ ಒತ್ತಾಯ ಹೋರಾಟ ಫಲಪ್ರದವಾಗಿದೆ. ಕೋವಿಡ್ ಕಾರಣದಿಂದ ಬೆಂಗಳೂರು-ಕಾರವಾರ ಬೆಳಗಿನ ರೈಲು ಸಂಚಾರವನ್ನು ಮಂಗಳೂರಿನಿಂದ ಕಾರವಾರದ ತನಕ ರೈಲ್ವೆ ಇಲಾಖೆ ಸ್ಥಗಿತಗೊಳಿಸಿತ್ತು. ಈ ಸಂಬಂಧ ಆಯಾ ಭಾಗದ ಪ್ರಯಾಣಿಕರು, ಸಾರ್ವಜನಿಕರು ಸದರಿ ರೈಲನ್ನು ಪುನರಾರಂಭಿಸುವಂತೆ ಒತ್ತಾಯಿಸಿದ್ದರು.

ಅದೇ ಸಮಯದಲ್ಲಿ ವಿಸ್ಟಾಡೋಮ್ ಪ್ರವಾಸಿ ಬೋಗಿಯಿರುವ ರೈಲನ್ನು ಯಶವಂತಪುರದಿಂದ ಮಂಗಳೂರು ತನಕ ಓಡಿಸಲಾಗುತ್ತಿತ್ತು. ಇದರಿಂದ ಕುಂದಾಪುರ ಕಾರವಾರ ಭಾಗದ ಪ್ರಯಾಣಿಕರು ಹಾಗೂ ಪ್ರವಾಸಿಗರಿಗೆ ನಿರಾಸೆಯಾಗಿತ್ತು. ಈ ಸಂಬಂಧ ಕಾರವಾರದವರೆಗೂ ಈ ರೈಲನ್ನು ವಿಸ್ತರಿಸಬೇಕು ಎಂದು ಕುಂದಾಪುರ , ಉತ್ತರ ಕನ್ನಡ ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿ ರೈಲು ಪ್ರಯಾಣಿಕರು ಸಂಸದೆ, ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿ ಒತ್ತಾಯಿಸಿದ್ದರು.
ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಸಚಿವೆ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಕಾರವಾರ-ಬೆಂಗಳೂರು ಹಗಲು ರೈಲನ್ನು ಪುರಾರಾರಂಭಿಸುವಂತೆ ಮನವಿ ಮಾಡಿದರು. ಸಚಿವರ ಮನವಿಯನ್ನು ಪುರಸ್ಕರಿಸಿದ ರೈಲ್ವೆ ಇಲಾಖೆ ಕಾರವಾರ-ಬೆಂಗಳೂರು ಬೆಳಗಿನ ರೈಲನ್ನು ಪುನರಾರಂಭಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿತ್ತು.

ನೈರುತ್ವ ರೈಲ್ವೆ ಬೆಂಗಳೂರು-ಕಾರವಾರ ರೈಲನ್ನು 16 ರಿಂದ ಪುನರಾರಂಭಿಸುತ್ತಿದೆ ಹಾಗು ಒಂದು ಹೊಸ ವಿಸ್ಟಾಡೋಮ್ ಕೋಚ್ ಕೂಡ ಈ ರೈಲಿಗೆ ಜೊತೆಗೊಳ್ಳಲಿದೆ. ಇನ್ನು ಮುಂದೆ ಪ್ರಕೃತಿ ರಮಣೀಯ ಪಶ್ಚಿಮ ಘಟ್ಟಗಳ ಹಾಗು ನಮ್ಮ ಕರಾವಳಿಯ ಅರಬೀ ಸಮುದ್ರದ ವಿಹಂಗಮ ನೋಟಗಳನ್ನು ರೈಲ್ವೆ ಪ್ರಯಾಣದ ನಡುವೆಯೇ ಕಣ್ತುಂಬಿಕೊಳ್ಳಬಹುದಾಗಿದೆ.

Leave a Comment

Your email address will not be published. Required fields are marked *