ಭಾರತದಲ್ಲಿ ಇನ್ಮುಂದೆ 15 ವರ್ಷಕ್ಕೂ ಹಳೆಯ ವಾಹನಗಳು ಓಡಾಡೋ ಹಾಗಿಲ್ಲ, ಎಲ್ಲವೂ ಗುಜರಿಗೆ ಎನ್ನುವ ವಿಚಾರ ತಿಳಿದಿರಬಹುದು.
ಆದರೆ ಇದು ಯಾವ ರೀತಿ ನಡೆಯುತ್ತದೆ ನಿಮ್ಮ ವಾಹನಗಳನ್ನು ಯಾವಾಗ ಗುಜರಿಗೆ ಹಾಕಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಇದರ ಪ್ರಕಾರ 15 ವರ್ಷ ಹಳೆಯ ಕಮರ್ಷಿಯಲ್ ವಾಹನ ಹಾಗೂ 20 ವರ್ಷ ಹಳೆಯ ಖಾಸಗಿ ವಾಹನ ಈ ನೀತಿಯ ಒಳಗೆ ಬರಲಿದ್ದು.
ಗಾಡಿಗಳನ್ನು ಕೇವಲ ವರ್ಷದ ಆಧಾರದಲ್ಲಿ ಗುಜರಿಗೆ ಹಾಕಲಾಗುವುದಿಲ್ಲ, ಇದನ್ನು ಅದರ ಫಿಟ್ನೆಸ್ ಆಧರಿಸಿ ಮಾಡಲಾಗುತ್ತದೆ. ತಂತ್ರಜ್ಞಾನ ಬಳಸಿ ಮಾಡಲ್ಪಡುವ ಫಿಟ್ನೆಸ್ ಟೆಸ್ಟ್ ನಲ್ಲಿ ವಾಹನ ವಿಫಲವಾದರೆ ಗುಜರಿ ಸೇರಲಿದೆ.
ಹೀಗೆ ಮಾಡಿದರೆ ಮತ್ತೆ ನಮ್ಮ ವಾಹನ..?
ಈ ರೀತಿ ಮಾಡಿದ ನಂತರ ನಿಮಗೆ ಒಂದು ಸರ್ಟಿಫಿಕೇಟ್ ನೀಡಲಾಗುವುದು, ಈ ಸರ್ಟಿಫಿಕೇಟ್ ನಿಂದ ನೀವು ಹೊಸ ವಾಹನ ಖರೀದಿಸುವ ಸಂದರ್ಭ 5%ರಿಯಾಯಿತಿ ದೊರಕಲಿದೆ,ಇದರೊಂದಿಗೆ ಯಾವುದೇ ರಿಜಿಸ್ಟ್ರೇಷನ್ ಫೀಸ್ ಇರುವುದಿಲ್ಲ,ಇದರೊಂದಿಗೆ ರೋಡ್ ಟ್ಯಾಕ್ಸ್ ಮೇಲೆ 25% ವಿನಾಯಿತಿ ಕೂಡ ಸಿಗಲಿದೆ.
ಇದರಿಂದ ಅನೇಕ ಉದ್ಯೋಗ ಸೃಷ್ಟಿ ಹಾಗೂ ಗುಜರಿ ಉದ್ಯಮ ಎತ್ತರಕ್ಕೆ ಏರಲಿದೆ..
ಅಷ್ಟಕ್ಕೂ ಇದು ಯಾವಾಗಿಂದ ಜಾರಿ…?
ಸರಕಾರಿ ವಾಹನಗಳಿಗೆ ಇದು 2022ರ ಏಪ್ರಿಲ್ ನಿಂದ ಜಾರಿಗೆ ಬರಲಿದ್ದು,ಕಮರ್ಷಿಯಲ್ ವಾಹನಗಳಿಗೆ 2023 ಏಪ್ರಿಲ್ ನಿಂದ ಹಾಗೂ ಖಾಸಗಿ ವಾಹನಗಳಿಗೆ 2024ರಿಂದ ಅನ್ವಯಿಸಲು ಇವೆ.