ಸಮಗ್ರ ನ್ಯೂಸ್: ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸೋದರ ಮುಲ್ತಾಜ್ ಅಲಿ ಮೃತದೇಹ 28 ಗಂಟೆಗಳ ಕಾರ್ಯಾಚರಣೆ ಬಳಿಕ ಕೂಳೂರಿನ ಸೇತುವೆ ಬಳಿ ಪತ್ತೆಯಾಗಿದೆ.
ಇನ್ನು ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್, ಮಲ್ತಾಜ್ ಅಲಿ ಅವರ ಆತ್ಮಹತ್ಯೆಗೆ ಹನಿಟ್ರ್ಯಾಪ್ ಕಾರಣ ಎಂದು ದೂರಿನಲ್ಲಿ ಅವರ ಸಹೋದರ ಉಲ್ಲೆಖಿಸಿದ್ದಾರೆ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಲ್ತಾಜ್ ಅಲಿ ಆತ್ಮಹತ್ಯೆಗೆ ಸಂಬಂಧಪಟ್ಟ ಆರೋಪಿಗಳು ದೇಶ ಬಿಟ್ಟು ಹೋಗದಂತೆ ಎಲ್ ಓ ಸಿ ಜಾರಿ ಮಾಡಿದ್ದೇವೆ. ನಿನ್ನೆ ಮುಂಜಾನೆ ಮುಮ್ರಾಜ್ ಅಲಿ ನದಿಗೆ ಹಾರಿರುವ ಮಾಹಿತಿ ಬಂದಿತ್ತು. ಅ.7 ರಂದು ಬೆಳಿಗ್ಗೆ 10 ಗಂಟೆಗೆ ಮುಲ್ತಾಜ್ ಅಲಿ ಮೃತದೇಹ ಸಿಕ್ಕಿದೆ.
ಹನಿ ಟ್ರ್ಯಾಪ್ ಮಾಡಿದ್ದಾರೆಂದು ಮುಮ್ರಾಜ್ ಅಲಿ ಸಹೋದರ ಕಾವೂರು ಠಾಣೆಯಲ್ಲಿ ದೂರು ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಕಾವೂರು ಠಾಣೆಯಲ್ಲಿ ಆರು ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. ದೂರಿನಲ್ಲಿ ಮೂರು ತಿಂಗಳಿನಿಂದ ಖಿನ್ನತೆಯಲ್ಲಿ ಇರುವುದರ ಬಗ್ಗೆ ಉಲ್ಲೇಖಿಸಲಾಗಿದೆ.
ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಸೆಕ್ಸ್ ವೀಡಿಯೊ ಆಧಾರದಲ್ಲಿ ಮುಲ್ತಾಜ್ ಗೆ ಬೆದರಿಕೆ ಹಾಕಿದ ಬಗ್ಗೆ ದೂರು ಸಲ್ಲಿಕೆಯಾಗಿದೆ.ಅಲ್ಲದೆ ವಾಯ್ಸ್ ನೋಟ್ನಲ್ಲಿ ಸತ್ತಾರ್ ಎಂಬಾತನ ಬಗೆ ಮುಮಾಜ್ ಹೇಳಿದ್ದಾರೆ.
ಆರೋಪಿ ರೆಹಮತ್ ಗಾಗಿ ಪೊಲೀಸ್ ತಂಡ ಹುಡುಕಾಟ ನಡೆಸುತ್ತಿದೆ. ಆತ್ಮಹತ್ಯೆಗೂ ಮುನ್ನ ಬಸ್ ಗೆ ಮುಮ್ರಾಜ್ ಅಲಿ ಕಾರು ಡಿಕ್ಕಿಯಾಗಿದೆ. ಬಸ್ ನವರ ಹೇಳಿಕೆಯನ್ನು ಪಡೆದಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿಕೆ ನೀಡಿದರು.