ಸಮಗ್ರ ನ್ಯೂಸ್: ಛತ್ತೀಸ್ಗಢದ ದಂತೇವಾಡ ಜಿಲ್ಲೆಯ ಅಬುಜ್ಮದ್ನಲ್ಲಿ ಶುಕ್ರವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಕನಿಷ್ಠ 20 ಮಾವೋವಾದಿಗಳನ್ನ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಂತೇವಾಡ ಮತ್ತು ನಾರಾಯಣಪುರದ ಜಿಲ್ಲಾ ರಿಸರ್ವ್ ಗಾರ್ಡ್ಗಳು (DRG) ಅಬುಜ್ಮದ್ನಲ್ಲಿ ಮಾವೋವಾದಿಗಳ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ವಿವಿಧ ಪೊಲೀಸ್ ಶಿಬಿರಗಳಿಂದ ಕಾರ್ಯಾಚರಣೆಗೆ ಹೊರಟರು.
“ಗೋವೆಲ್-ನೆಂಡೂರ್-ತುಲ್ತುಲಿ ಎಂಬ ಮೂರು ಗ್ರಾಮಗಳ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿದೆ” ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂರು ಗ್ರಾಮಗಳು ದಾಂತೇವಾಡದ ಅಬುಜ್ಮದ್’ನಲ್ಲಿ ಬರುತ್ತವೆ.