ಇಲ್ಲಿದೆ ಸಂಪೂರ್ಣ ಮಾಹಿತಿ
ಸಮಗ್ರ ನ್ಯೂಸ್: ಹುರುಳಿ ಸೊಪ್ಪಿನಲ್ಲಿ ರಂಜಕ, ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಕಬ್ಬಿಣದ ಗುಣಗಳು ಸಮೃದ್ಧವಾಗಿವೆ.ಹುರುಳಿ ಕಾಳು ಕಡಿಮೆ ಕಾರ್ಬೋಹೈಡ್ರೆಟ್ ಮತ್ತು ಹೆಚ್ಚಿನ ಪ್ರೊಟೀನ್ ಹಾಗೂ ಫೈಬರ್ ಅನ್ನು ಹೊಂದಿರುತ್ತದೆ.
ಹುರುಳಿ ಕಾಳು ಪುರುಷರ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಕಡಿಮೆ ವೀರ್ಯಾಣು ಸಂಖ್ಯೆಯ ಸಮಸ್ಯೆ ಹೊಂದಿರುವ ಪುರುಷರಿಗೂ ಈ ಹುರುಳಿ ಕಾಳು ಉಪಯುಕ್ತವಾಗಿದೆ.
ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ಕೆಲವು ದಿನಗಳವರೆಗೆ ಹುರುಳಿ ಕಾಳು ನಿಯಮಿತವಾಗಿ ಸೇವಿಸಿದರೆ ಪರಿಹಾರ ಸಿಗುತ್ತದೆ.
ಮಧುಮೇಹದ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯವಾಗಿದೆ. ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಹುರುಳಿ ಕಾಳು ಸಹಾಯಕವಾಗಿದೆ.ತೂಕ ಇಳಿಕೆ ಕಡಿಮೆ ಮಾಡುತ್ತದೆ.ವಿಷಕಾರಿ ಅಂಶಗಳನ್ನು (ಟಾಕ್ಸಿನ್) ತೆಗೆದುಹಾಕುತ್ತದೆ.ಕರಗುವ ಮತ್ತು ಕರಗದೇ ಇರುವ ನಾರಿನ ಗುಣಗಳನ್ನು ಹೊಂದಿರುವ ಹುರುಳಿಕಾಳು ನಿಮ್ಮ ಜೀರ್ಣಾಂಗ ಮತ್ತು ಕರುಳನ್ನು ಶುದ್ದಿಗೊಳಿಸಲು ಸಹಾಯಮಾಡುತ್ತದೆ.
ಇದು ನೋಡಲು ಒಂದು ನಯವಾದ ಮಸೂರದಂತಿರುವ ಕಾಳಾಗಿದ್ದು,ಇದನ್ನು ಋತುಸ್ರಾವದ ತೊಂದರೆ, ಮೂತ್ರಪಿಂಡದ ಕಲ್ಲುಗಳು, ಆಸ್ತಮಾ, ಶೀತ ಮತ್ತು ಕೆಮ್ಮಿನಂತಹ ತೊಂದರೆಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಪರ್ಯಾಯ ಜಾನಪದ ಔಷಧಿಯಾಗಿ ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ.