ಸಮಗ್ರ ನ್ಯೂಸ್: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯದ ಪ್ರಕಾರ, ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವವಿದೆ. ಸೂರ್ಯಗ್ರಹಣವು ಖಗೋಳ ವಿದ್ಯಮಾನವಾಗಿದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ.
ಈ ವರ್ಷದ ಎರಡನೇ ಸೂರ್ಯಗ್ರಹಣವು 2024 ರ ಅಕ್ಟೋಬರ್ 2 ರಂದು ಸಂಭವಿಸಲಿದೆ. ಇಂದು ಹಿಂದೂ ಕ್ಯಾಲೆಂಡರ್ ನಲ್ಲಿ ಅಮಾವಾಸ್ಯೆ ತಿಥಿ. ಗ್ರಹಣವು ರಾತ್ರಿ 9:13 ಕ್ಕೆ ಪ್ರಾರಂಭಗೊಂಡು ಮತ್ತು ಆಗಸ್ಟ್ 3 ರಂದು ಮುಂಜಾನೆ 3:17 ಕ್ಕೆ ಕೊನೆಗೊಳ್ಳುತ್ತದೆ. ಸಂಪೂರ್ಣ ಸೂರ್ಯಗ್ರಹಣವು ಸುಮಾರು 6 ಗಂಟೆ 4 ನಿಮಿಷಗಳ ಕಾಲ ಇರುತ್ತದೆ.
ಬ್ರೆಜಿಲ್, ಕುಕ್ ದ್ವೀಪಗಳು, ಚಿಲಿ, ಪೆರು, ಅರ್ಜೆಂಟೀನಾ, ಮೆಕ್ಸಿಕೊ, ಹೊನೊಲುಲು, ಫಿಜಿ, ಉರುಗ್ವೆ, ಅಂಟಾರ್ಕ್ಟಿಕಾ, ನ್ಯೂಜಿಲೆಂಡ್, ಆರ್ಕ್ಟಿಕ್, ಬ್ಯೂನಸ್ ಐರಿಸ್ ಮತ್ತು ಬೆಕಾ ದ್ವೀಪಗಳಲ್ಲಿ ವರ್ಷದ ಎರಡನೇ ಸೂರ್ಯಗ್ರಹಣ ಗೋಚರಿಸಲಿದೆ. ಗ್ರಹಣವು ಭಾರತೀಯ ಕಾಲಮಾನದಂತೆ ರಾತ್ರಿ ಸಂಭವಿಸುವುದರಿಂದ ಭಾರತದಲ್ಲಿ ಇದು ಗೋಚರಿಸುವುದಿಲ್ಲ.