ಸಮಗ್ರ ನ್ಯೂಸ್: ಕೊಕ್ಕಡ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಗುರುವಾರ ದಾಳಿ ನಡೆಸಿದ ಧರ್ಮಸ್ಥಳ ಪೊಲೀಸರು ಗೋಮಾಂಸ ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಮಲ್ಲಿಗೆಮಜಲು ಎಂಬಲ್ಲಿನ ಉಸ್ಮಾನ್ ಅವರ ಅಡಿಕೆ ತೋಟದಲ್ಲಿ ಗೋಹತ್ಯೆಗೈದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದರು.
ಈ ಬಗ್ಗೆ ಸುಳಿವು ದೊರೆತ ಪೊಲೀಸರು ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಸುಮಾರು 10 ಕೆ.ಜಿ. ಜಾನುವಾರಿನ ಮಾಂಸ, ಜಾನುವಾರಿನ ದೇಹದ ಇತರ ಭಾಗಗಳು, ಬ್ಯಾಟರಿ ಚಾಲಿತ ತೂಕದ ಯಂತ್ರ-1, ಚಾಕು ಸೇರಿದಂತೆ ಇತರ ಸೊತ್ತುಗಳು ಪತ್ತೆಯಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ಸುಮಾರು 5,250 ರೂ. ಆಗಿದೆ.
ಗೋಮಾಂಸ ಮಾಡುತ್ತಿದ್ದ ಅಡ್ಡೆಗೆ ಧರ್ಮಸ್ಥಳ ಠಾಣಾಧಿಕಾರಿ ಕಿಶೋರ್ ಪಿ. ಹಾಗೂ ಠಾಣಾ ಸಿಬಂದಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸ್ಥಳದಿಂದ ಪರಾರಿಯಾಗಿರುವ ಉಸ್ಮಾನ್ ಮತ್ತು ಸಲೀಂ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಜಾನುವಾರು ಸಂರಕ್ಷಣ ಕಾಯ್ದೆಯನ್ವಯ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.