Ad Widget .

ಕರ್ನಾಟಕದ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ ಕೇಂದ್ರ ಸರ್ಕಾರ

ಸಮಗ್ರ ನ್ಯೂಸ್:ಭೂತಾನ್‌ ದೇಶದಿಂದ 17 ಸಾವಿರ ಮೆಟ್ರಿಕ್ ಟನ್ ಅಡಿಕೆಯನ್ನು ಷರತ್ತು ರಹಿತವಾಗಿ ಆಮದು ಮಾಡಿಕೊಳ್ಳಲು ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಕರ್ನಾಟಕದ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

2022 ಸೆಪ್ಟೆಂಬರ್‌ನಲ್ಲಿ ಕನಿಷ್ಟ
ಆಮದು ಬೆಲೆಯ ಷರತ್ತು ಇಲ್ಲದೆ 17 ಸಾವಿರ ಮೆಟ್ರಿಕ್ ಟನ್ ಅಡಿಕೆಯನ್ನು ಆಮದು ಮಾಡಿ ಕೇಂದ್ರ ಸರಕಾರ ಅನುಮತಿ ನೀಡಿತ್ತು.ಇದರಿಂದಾಗಿ ದೇಶಿ ಮಾರುಕಟ್ಟೆಯ ಮೇಲೆ ಸ್ವಲ್ಪ ಪ್ರಮಾಣದಲ್ಲಿ ದುಷ್ಪರಿಣಾಮ ಆಗಿತ್ತು.ಆಮದಿನ ವಿರುದ್ಧ ರೈತರು ಸಂಘಟನೆಯವರಿಂದ ಧ್ವನಿಸತ್ತಿದ್ದರಿಂದ ಅಡಿಕೆ ಆಮಾದಾಗಿರಲಿಲ್ಲ.

Ad Widget . Ad Widget . Ad Widget .

ಕಳೆದ ಬಾರಿ ಆಮದು ಮಾಡಿದಾಗ ಜೈಗಾಂವ್ ಹಾಗೂ ಚಾಮುರ್ಚಿ ಎಂಬ ಎರಡು ಊರುಗಳ ಮೂಲಕ ದೇಶದೊಳಗೆ ಬರಲು ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಆ ಎರಡು ಊರುಗಳ ಜತೆಗೆ ಒಡಿಶಾ ರಾಜ್ಯದ ಹತಿಸರ್ ಹಾಗೂ ಅಸ್ಸಾಂನ ದರ್ರಾಂಗಾ ಎಂಬ ಎರಡು ಊರುಗಳ ಮೂಲಕವೂ ಆಮದು ಅಡಿಕೆ ಬರಲು ಅವಕಾಶ ನೀಡಲಾಗಿದೆ.

ಈ ಎರಡು ಊರುಗಳು ಕೂಡಾ ಅಡಿಕೆ ಬೆಳೆಯುವ ಊರಾಗಿರುವುದರಿಂದ ಭೂತಾನ್ ಅಡಿಕೆಯ ಜತೆಗೆ ಅಸ್ಸಾಂ ಮತ್ತು ಒಡಿಶಾದ ಅಡಿಕೆ ಕೂಡಾ ಗುಜರಾತ್ ರಾಜಸ್ಥಾನ, ಮಹಾರಾಷ್ಟ್ರ ಕಡೆಯ ಅಡಿಕೆ ಬಳಕೆದಾರರಿಗೆ ತಲುಪಿ ಕರ್ನಾಟಕದ ಕರಾವಳಿ ಮತ್ತಯು ಮಲೆನಾಡಿನಲ್ಲಿ ಬೆಳೆಯುವ ಉತ್ಕೃಷ್ಟ ಅಡಿಕೆಯ ಮಾರುಕಟ್ಟೆಗೆ ಹಾನಿ ಉಂಟಾಗಲಿದೆ ಎಂದು ಕೃಷಿಕರ ಅಭಿಪ್ರಾಯ.

Leave a Comment

Your email address will not be published. Required fields are marked *