ಸಮಗ್ರ ನ್ಯೂಸ್: ಎಲೆಕ್ಟಿಕ್ ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿರುವ ಭಾಗವಾಗಿ ಹೊಸದಾಗಿ ಪರಿಚಯಿಸಲಾದ ಪಿಎಂ ಇ-ಡ್ರೈವ್ ಯೋಜನೆಯಡಿ ಎಲೆಕ್ಟಿಕ್ ದ್ವಿಚಕ್ರ ವಾಹನಗಳ ಖರೀದಿದಾರರು 10,000 ರೂ.ವರೆಗೆ ಸಬ್ಸಿಡಿ ಪಡೆಯಬಹುದು ಎಂದು ಕೇಂದ್ರ ಸಚಿವ ಹೆಚ್. ಡಿ.ಕುಮಾರಸ್ವಾಮಿ ಘೋಷಣೆ ನೀಡಿದ್ಧಾರೆ.
ಈ ಪೈಕಿ ಇನ್ನೋವೇಟಿವ್ ವೆಹಿಕಲ್ ಎನ್‌ಹಾನ್ಸ್‌ಮೆಂಟ್ (ಪಿಎಂ ಇ-ಡ್ರೈವ್)ಯೋಜನೆಯಲ್ಲಿ ಪಿಎಂ ಎಲೆಕ್ಟಿಕ್ ಡ್ರೈವ್ ಕ್ರಾಂತಿಗೆ 10,900 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಇದು ಎರಡು ವರ್ಷಗಳವರೆಗೆ ಮಾನ್ಯವಾಗಿರಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಪಿಎಂ ಇ-ಡ್ರೈವ್ ಯೋಜನೆಯಡಿ ಮೊದಲ ವರ್ಷ ಒಂದು ಕಿಲೋ ವ್ಯಾಟ್ ಬ್ಯಾಟರಿಗೆ 5 ಸಾವಿರ ರೂ ಪಾವತಿಸಲು ನಿರ್ಧರಿಸಲಾಗಿದೆ. ಗರಿಷ್ಠ 10 ಸಾವಿರ ರೂ ಮಾತ್ರ ನೀಡುವುದಾಗಿ ತಿಳಿಸಲಾಗಿದೆ.
ಎರಡನೇ ವರ್ಷದಲ್ಲಿ ಪ್ರತಿ ಕಿಲೋ ವ್ಯಾಟ್‌ಗೆ 2,500 ರೂ., ಗರಿಷ್ಠ 5,000 ರೂ ನೀಡಲಾಗುವುದು. ಅದೇ ರೀತಿ ರಿಕ್ಷಾಗಳಿಗೆ 25 ಸಾವಿರ ರೂ ಹಾಗೂ ಎರಡನೇ ವರ್ಷಕ್ಕೆ 12,500 ರೂ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಈ ಯೋಜನೆಯ ಪ್ರಯೋಜನ ಪಡೆಯಲು ಆಧಾರ್ ಆಧರಿತ ಇ-ವೋಚರ್ ಅನ್ನು ಪಿಎಂ ಇ-ಡ್ರೈವ್ ಪೋರ್ಟಲ್‌ನಲ್ಲಿ ರಚಿಸಲಾಗಿದೆ. ಇದಕ್ಕೆ ಖರೀದಿದಾರ ಮತ್ತು ಡೀಲರ್ ಇಬ್ಬರೂ ಸಹಿ ಮಾಡಬೇಕು ಮತ್ತು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಲಾಗಿದೆ.