ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ನಂದಿನ ಹಾಲಿನ ದರ ಹೆಚ್ಚಳ ಮಾಡುತ್ತೇವೆ. ಹೆಚ್ಚಳ ಮಾಡಿದ ಹಾಲಿನ ದರ ರೈತರಿಗೆ ಹೋಗಬೇಕು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ಘಾಟನೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಂದಿನ ಹಾಲಿನ ದರ ಹೆಚ್ಚಳ ಸಂಬಂಧ ಸಭೆ ಕರೆದು ಮಾತುಕತೆ ನಡೆಸಿ ಹಾಲಿನ ದರ ಹೆಚ್ಚಳ ಮಾಡೋಣ ಎಂದು ಹೇಳಿದ್ದಾರೆ. ಆ ಮೂಲಕ ಗ್ರಾಹಕರಿಗೆ ಮತ್ತೊಮ್ಮೆ ಶಾಕ್ ನೀಡಲು ಸರ್ಕಾರ ಮುಂದಾಗುತ್ತಿದೆ.
ನೀವೆಲ್ಲ ರೈತರ ಮಕ್ಕಳಿದ್ದಾರೆ, 3 ರೂಪಾಯಿ ಹೆಚ್ಚಳ ಮಾಡಿದರೆ ಅಥವಾ ಏನೇ ಹೆಚ್ಚು ಮಾಡಿದ್ರೂ ಲಬ್ಬೊ ಲಬ್ಬೋ ಅಂತಾ ಹೇಳುತ್ತಾರೆ. ನಾವು ರೈತರ ಮಕ್ಕಳು, ರೈತರು ಮಕ್ಕಳು ಎಂದು ಹೇಳುತ್ತಾರೆ. ಆದರೆ ರೈತರ ಮಕ್ಕಳಿಗೆ ನೀವೇನಾದ್ರೂ ಕೊಟ್ಟಿದ್ದೀರಾ? ಏನೂ ಮಾಡದೇ ನಾವು ರೈತರ ಮಕ್ಕಳು ಅಂತಾ ಹೇಳುತ್ತಾರೆ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.