ಕುಕ್ಕೆ: ಭಕ್ತಾದಿಗಳಿಗೆ ಈಗ ತೀರ್ಥಸ್ನಾನಕ್ಕೆ ಶವರ್ ಬಾತ್ ವ್ಯವಸ್ಥೆ

ಸಮಗ್ರ ನ್ಯೂಸ್: ಕುಮಾರಧಾರ ನದಿಯಲ್ಲಿ ನೀರಿನ ಪ್ರಮಾಣ ಅಧಿಕವಾಗಿರುವ ಕಾರಣ ಸ್ನಾನ ಘಟ್ಟದ ಬಳಿ ದೇಗುಲದ ವತಿಯಿಂದ ಭಕ್ತರಿಗೆ ಶವರ್ ಬಾತ್ ವ್ಯವಸ್ಥೆ ಮಾಡಿದೆ.

Ad Widget ... ..

ಮಳೆಗಾಲ ಸಂದರ್ಭದಲ್ಲಿ ಯಾವುದೇ ಅನಾಹುತ ನಡೆಯಬಾರದು ಎನ್ನುವ ದೃಷ್ಠಿಯಲ್ಲಿ ದ.ಕ ಜಿಲ್ಲಾಧಿಕಾರಿ ಭಕ್ತರು ಕುಮಾರಧಾರ ನದಿಯಲ್ಲಿ ಇಳಿದು ತೀರ್ಥ ಸ್ನಾನ ಮಾಡದಂತೆ ಆದೇಶ ಹೊರಡಿಸಿದ್ದರು . ಹೀಗಾಗಿ ಆರಂಭದಲ್ಲಿ ತಾತ್ಕಾಲಿಕವಾಗಿ ಡ್ರಮ್ಮಿನಲ್ಲಿ ನದಿ ನೀರನ್ನು ತುಂಬಿ ತೀರ್ಥಸ್ನಾನ ಮಾಡಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದೀಗ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಶವರ್ ವ್ಯವಸ್ಥೆ ಮಾಡಲಾಗಿದೆ.

Ad Widget

ಮಳೆಗಾಲ ಮುಗಿಯುವವರೆಗೆ ಮುಂಜಾಗೃತಾ ಕ್ರಮವಾಗಿ ಮತ್ತು ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ತೀರ್ಥ ಸ್ನಾನ ಮಾಡಲು ಕುಮಾರಧಾರ ನದಿಯ ತಟದಲ್ಲಿ ಈ ವ್ಯವಸ್ಥೆ ಮಾಡಲಾಗಿದ್ದು ಭಕ್ತಾದಿಗಳು ಸದುಪಯೋಗ ಪಡಿಸಿಕೊಳ್ಳಬಹುದು.

ದೇಗುಲದ ಎ.ಇ.ಓ ಯೇಸುರಾಜ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಉದಯ್ ಕುಮಾರ್ ಹಾಗೂ ಸಿಬಂಧಿ ಕುಮಾರಧಾರ ನದಿ ಸ್ನಾನಘಟ್ಟಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *