ಸಮಗ್ರ ನ್ಯೂಸ್: ಭಾರತದ ಶ್ರೀಮಂತ ನಗರವಾಗಿ ಇದೀಗ ಮತ್ತೆ ಮುಂಬಯಿ ಮೊದಲ ಸ್ಥಾನ ಗಳಿಸುವುದಲ್ಲದೆ ದೆಹಲಿ ಮತ್ತು ಹೈದರಾಬಾದ್ ಕ್ರಮವಾಗಿ ಎರಡು, ಮೂರು ಸ್ಥಾನಗಳನ್ನು ಅಲಂಕರಿಸಿದೆ. ಐಟಿ ಕ್ಯಾಪಿಟಲ್ ಬೆಂಗಳೂರನ್ನು ಹೈದರಾಬಾದ್ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಇಳಿದಿದೆ.
ಭಾರತದ ಶ್ರೀಮಂತ ನಗರಗಳ ಪಟ್ಟಿಯನ್ನು ಹುರುನ್ ಇಂಡಿಯಾ ರೀಸರ್ಚ್ ಸಂಸ್ಥೆ ಬಿಡುಗಡೆ ಮಾಡಿದ್ದು ಇದು ದೇಶದ ಅತೀ ಹೆಚ್ಚು ಶ್ರೀಮಂತರು ಇರುವ ನಗರಗಳನ್ನು ಗುರುತಿಸಿ ಲೆಕ್ಕಾಚಾರ ನಡೆಸಿದೆ. ಈ ವರ್ಷ ಭಾರತವು 94 ಹೊಸ ಬಿಲಿಯನೇರ್‌ಗಳನ್ನು ಸ್ವಾಗತಿಸಿದೆ. ಭಾರತದ ಬಿಲಿಯನೇರ್‌ಗಳು ಸಾಮೂಹಿಕ ಸಂಪತ್ತು ಸರಿಸುಮಾರು 1 ಟ್ರಿಲಿಯನ್ ಯುಎಸ್ ಡಾಲರ್. ಇದು ಒಟ್ಟು ಜಾಗತಿಕ ಸಂಪತ್ತಿನ ಶೇ. 7ರಷ್ಟಿದೆ. ಯುನೈಟೆಡ್ ಸ್ಟೇಟ್ಸ್ ಬಳಿಕ ಜಾಗತಿಕವಾಗಿ ಇದು ಎರಡನೇ ಅತಿ ಹೆಚ್ಚು ಏರಿಕೆಯಾಗಿದೆಯ. ಭಾರತದ ಆರ್ಥಿಕ ರಾಜಧಾನಿ ವೇಗವಾಗಿ ಬೆಳೆಯುತ್ತಿರುವ ಮುಂಬಯಿ ಅನ್ನು ವಿಶ್ವದ ಮೂರನೇ ಶ್ರೀಮಂತ ನಗರವನ್ನಾಗಿ ಮಾಡಿದೆ ಎಂದು ಹುರುನ್ ಇಂಡಿಯಾ ರೀಸರ್ಚ್ ಸಂಸ್ಥೆ ಬಿಡುಗಡೆ ಮಾಡಿದೆ.
ಬೆಂಗಳೂರಿಗೆ ನಾಲ್ಕನೇ ಸ್ಥಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ ಬೆಂಗಳೂರು ಉದ್ಯಮಿಗಳು, ಬಂಡವಾಳ, ಹೂಡಿಕೆ ಹೈದರಾಬಾದ್ ನತ್ತ ಸಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.