ಸಮಗ್ರ ನ್ಯೂಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ -2024ರ 10 ಮೀಟರ್ ಏರ್ ರೈಫಲ್ ಫೈನಲ್‌ನಲ್ಲಿ ಭಾರತದ ರೈಫಲ್ ಶೂಟರ್ ಅವನಿ ಲೆಖರಾ ಚಿನ್ನ ಗೆದ್ದಿದ್ದಾರೆ. ಮೋನಾ ಅಗರ್ವಾಲ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಅವನಿ ಲೆಖರಾ ಅವರು ಮೂರು ವರ್ಷಗಳ ಹಿಂದಿನ 249.6 ಅಂಕಗಳ ತನ್ನದೇ ದಾಖಲೆಯನ್ನು ಮುರಿದಿದ್ದು, 249.7 ಅಂಕ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.
ಏರ್ ರೈಫಲ್‌ನಲ್ಲಿ ಭಾರತದ ಮೋನಾ ಅಗರ್ವಾಲ್ ಅವರು ಕಂಚಿಕ ಪದಕವನ್ನು ಗೆದಿದ್ದಾರೆ. ಮೋನಾ 228.7ರ ಅಂತಿಮ ಸ್ಕೋರ್‌ನೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಅರ್ಹತಾ ಸುತ್ತಿನಲ್ಲಿ, ಅವನಿ 625.8 ಅಂಕಗಳನ್ನು ಗಳಿಸಿ 627.5 ಅಂಕಗಳೊಂದಿಗೆ ಪ್ಯಾರಾಲಿಂಪಿಕ್ಸ್ ಅರ್ಹತಾ ದಾಖಲೆಯನ್ನು ಮುರಿದ ಐರಿನಾ ಶ್ಚೆಟ್ನಿಕ್ ಅವರ ನಂತರದ ಸ್ಥಾನ ಪಡೆದಿದ್ದರು. ಎರಡು ಬಾರಿ ವಿಶ್ವಕಪ್ ಚಿನ್ನದ ಪದಕ ವಿಜೇತರಾಗಿರುವ ಮೋನಾ ತನ್ನ ಚೊಚ್ಚಲ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ.
ಭಾರತಕ್ಕೆ ಇನ್ನೂ ಹಲವು ಪದಕಗಳು ಬರುವ ನಿರೀಕ್ಷೆಯಿದ್ದು, ಈಗಾಗಲೇ ಪುರುಷರ 10ಮೀಟರ್ ಏರ್ ಪಿಸ್ತೂಲ್‌ನಲ್ಲಿ ಮನೀಶ್ ನರ್ವಾಲ್ ಫೈನಲ್‌ಗೆ ಅರ್ಹತೆ ಪಡೆಯುವ ಮೂಲಕ ಪದಕ ಖಚಿತಪಡಿಸಿದ್ದಾರೆ.