Ad Widget .

ಸಂಘದ ಸ್ವಯಂ ಸೇವಕ ಹುದ್ದೆಯಿಂದ ಮುರಳೀಕೃಷ್ಣ ಹಸಂತಡ್ಕ ಬಿಡುಗಡೆ| ಪಕ್ಷದ ಜವಾಬ್ದಾರಿ ವಹಿಸಲು ವಿಎಚ್ ಪಿ ಸೂಚನೆ

ಸಮಗ್ರ ನ್ಯೂಸ್: ಮೂರು ದಶಕಗಳ ಪರಿವಾರ ಸಂಘಟನೆಗಳ ವಿವಿಧ ಜವಾಬ್ದಾರಿ ನಿರ್ವಹಿಸಿದ ಮುರಳಿಕೃಷ್ಣ ಹಸಂತಡ್ಕ ಅವರನ್ನು ಸಂಘದ ಸ್ವಯಂ ಸೇವಕ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರೀಯರಾಗಿದ್ದು ಪರಿವಾರ ಸಂಘಟನೆಗಳಲ್ಲಿ ಸುದೀರ್ಘ 28 ವರ್ಷಗಳ ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಮುರಳಿಕೃಷ್ಣ ಹಸಂತಡ್ಕ ಅವರನ್ನು ಇದೀಗ ಸಂಘದಿಂದ ಪೂರ್ಣವಾಗಿ ಬಿಡುಗಡೆಗೊಳಿಸಿ ಪಕ್ಷ ಸಂಘಟನೆಯನ್ನು ಮಾಡುವಂತೆ ವಿಶ್ವಹಿಂದು ಪರಿಷದ್ ಸೂಚನೆ ನೀಡಿದೆ. ಈ ಬೆಳವಣಿಗೆ ಪುತ್ತೂರಿನ ಮುಂದಿನ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

Ad Widget . Ad Widget . Ad Widget .

ವಿದ್ಯಾರ್ಥಿ ಜೀವನದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಮುರಳಿಕೃಷ್ಣ ಅವರು, ಆರಂಭದಲ್ಲಿ ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದರು. ಬಜರಂಗದಳದ ಗ್ರಾಮಾಂತರ ಸಂಚಾಲಕರಾಗಿ ಮೊದಲು ಜವಾಬ್ದಾರಿ ಸ್ವೀಕರಿಸಿದ್ದರು. ಆ ಬಳಿಕ ಬಜರಂಗದಳ ಜಿಲ್ಲೆ, ರಾಜ್ಯ ಘಟಕದಲ್ಲೂ ಜವಾಬ್ದಾರಿ ನಿಭಾಯಿಸಿದ್ದಾರೆ. ಬಜರಂಗದಳ ದಕ್ಷಿಣ ವಿಭಾಗ ಪ್ರಾಂತ ಸಹಸಂಯೋಜಕರಾಗಿ 28 ವರ್ಷ ಸೇವೆ ಸಲ್ಲಿಸಿದ್ದಾರೆ. ವಿಶ್ವಹಿಂದು ಪ್ರಾಂತ ಗೋ ರಕ್ಷಾ ಪ್ರಮುಖರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ಇದೀಗ ಸಂಘದ ಸೂಚನೆಯಂತೆ ಸಂಘಟನೆಯ ವಿವಿಧ ಜವಾಬ್ದಾರಿಯಿಂದ ಅವರನ್ನು ಬಿಡುಗಡೆಗೊಳಿಸಲಾಗಿದೆ.

ಜು.13ರಂದು ಬೆಂಗಳೂರಿನಲ್ಲಿ ನಡೆದ ವಿಶ್ವಹಿಂದು ಪರಿಷತ್ ಪ್ರಾಂತೀಯ ಬೈಠಕ್‌ನಲ್ಲಿ ಅವರನ್ನು ಸಂಘಟನೆಗಳ ಜವಾಬ್ದಾರಿಯಿಂದ ವಿಮುಖಗೊಳಿಸಿ ಮುಂದೆ ಪಕ್ಷ ಸಂಘಟನೆ ಮಾಡುವಂತೆ ಸೂಚಿಸಲಾಗಿದೆ. ಈಗಾಗಲೇ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದಿರುವ ಅವರು ಮುಂದೆ ಅದನ್ನು ನವೀಕರಣಗೊಳಿಸಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಎರಡು ವರ್ಷ ಪೂರ್ಣಗೊಳಿಸಿದ ಬಳಿಕ ಅವರಿಗೆ ಪಕ್ಷದಲ್ಲೂ ಜವಾಬ್ದಾರಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಪರಿವಾರ ಸಂಘಟನೆ ಒಂದು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರೆ ಅದರ ಹಿಂದೆ ದೂರ ದೃಷ್ಟಿಯಿರುತ್ತದೆ. ಅದೇ ಉದ್ದೇಶಕ್ಕಾಗಿ ಪುತ್ತೂರಿನ ರಾಜಕೀಯ ಬೆಳವಣಿಗೆಯಲ್ಲಿ ಸಂಘ ಪರಿವಾರ ಮುರಳಿಕೃಷ್ಣ ಹಸಂತಡ್ಕ ಅವರನ್ನು ಮುಂದೆ ಬಿಟ್ಟಿದೆ ಎನ್ನಲಾಗಿದೆ. ಮುರಳಿಕೃಷ್ಣ ಹಸಂತಡ್ಕ ಅವರಿಗೆ ಬಹಳ ಹಿಂದೆಯೇ ಬಿಜೆಪಿಯಿಂದ ಆಫರ್ ಇತ್ತು. ಆದರೆ ಅದನ್ನು ಬದಿಗೊತ್ತಿ ಸಂಘಟನೆಯಲ್ಲೇ ಮುಂದುವರಿದಿದ್ದರು. ಆದರೆ ಇದೀಗ ವಿಶ್ವಹಿಂದು ಪರಿಷದ್ ಸೂಚನೆಯಂತೆ ಅವರು ಬಿಜೆಪಿಯಲ್ಲಿ ಸಕ್ರಿಯರಾಗಲಿದ್ದಾರೆ. ಮುಂದಿನ ಎರಡು ವರ್ಷ ಅವರು ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ನಿರ್ವಹಿಸಿ ಬಳಿಕ ಅವರಿಗೆ ಪಕ್ಷದಿಂದ ಜವಾಬ್ದಾರಿ ನೀಡಲಾಗುತ್ತದೆ ಹೇಳಲಾಗಿದ್ದು ಮುಂದಿನ ವಿಧಾನಸಭೆ ಚುನಾವಣೆಯ ಸಂದರ್ಭ ಮುರಳೀಕೃಷ್ಣ ಹಸಂತಡ್ಕ ಅವರ ಹೆಸರೂ ಅಂತಿಮವಾಗುವ ಸಾಧ್ಯತೆಗಳಿವೆ.

Leave a Comment

Your email address will not be published. Required fields are marked *