ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ರಾಣಿಝರಿ ಎಡ್ಜ್ ಪಾಯಿಂಟ್ ಬಿರುಕು ಬಿಟ್ಟಿರುವ ರೀತಿ ಗೂಗಲ್ ಮ್ಯಾಪ್ ನಲ್ಲಿ ಗೋಚರಿಸಿದ್ದು, ಸ್ಥಳಕ್ಕೆ ಆ.21 ರಂದು ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು.
ಚಿಕ್ಕಮಗಳೂರು-ದಕ್ಷಿಣ ಕನ್ನಡ ಗಡಿಭಾಗದಲ್ಲಿರುವ ರಾಣಿ ಝರಿ ಪ್ರವಾಸಿತಾಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಾರಿ ಮಳೆಯಾಗುತ್ತಿದೆ. ಗೂಗಲ್ ಮ್ಯಾಪ್ನಲ್ಲಿ ಬಿರುಕು ಕಂಡು ಬರುತ್ತಿರುವ ಹಿನ್ನೆಲೆ ಪುತ್ತೂರು ಉಪವಿಭಾಗಧಿಕಾರಿಗಳು ರಾಣಿಝರಿ ಸಮೀಪ
ಬಾರಿ ಮಳೆಯಾಗುತ್ತಿರುವುದರಿಂದ `ಭೂಮಿಕುಸಿತವಾಗುವ ಸಂಭವವಿದೆ ಎಂದು ಚಿಕ್ಕಮಗಳೂರು ಉಪವಿಭಾಗಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಎಚ್ಚೆತ್ತ ಉಪವಿಭಾಗಧಿಕಾರಿಗಳು ಸೂಚನೆಯ ಮೇರೆಗೆ ನಿಡುವಾಳೆ ಮತ್ತು ಸುಂಕಸಾಲೆ ಗ್ರಾಮ ಲೆಕ್ಕಾಕಾರಿಗಳಾದ ಜಯಪ್ರಕಾಶ್ ಮತ್ತು ಮಹೇಶ್ ಸ್ಥಳ್ಕಕೆ ತೆರಳಿ ಮಾಹಿತಿನೀಡಿದ್ದು, ಯಾವುದೇ
ಭೂಕುಸಿತ ಹಾಗೂ ಬಿರುಕು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.